ಮಡಿಕೇರಿ ಆ.24 : ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಆ.28 ರಂದು ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದ್ದು, ಗ್ರಾಮಸ್ಥರು, ಗ್ರಾಮವ್ಯಾಪ್ತಿಯ ನಾಗರಿಕರು ರಕ್ದದಾನ ಮಾಡಬಹುದಾಗಿದೆ. ಅದೇ ದಿನ ಶ್ರೀಮತಿ ಡಿ.ಚೆನ್ನಮ್ಮ ಪ.ಪೂ.ಕಾಲೇಜಿನ ವಿದ್ಯಾಥಿ೯ಗಳಿಗೆ ರಕ್ತಗುಂಪು ಪತ್ತೆ ಶಿಬಿರವೂ ನಡೆಯಲಿದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್ ತಿಳಿಸಿದ್ದಾರೆ.
ಶಿಬಿರಕ್ಕೆ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ಹರದೂರು ಗ್ರಾಮ ಪಂಚಾಯಿತಿ, ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜು ಮಾದಾಪುರ, ಜಿಲ್ಲಾ ರಕ್ತನಿಧಿ ಕೇಂದ್ರ , ಪ್ರಾಥಮಿಕ ಆರೋಗ್ಯ ಕೇಂದ್ರ, ಮಾದಾಪುರ, ಶ್ರೀ ವಿನಾಯಕ ಸೇವಾ ಸಮಿತಿ ಗರಗಂದೂರು, ಸುಂಟಿಕೊಪ್ಪ ಜೆಸಿಐ ಸೇರಿದಂತೆ ವಿವಿಧ ಸಂಘಟನೆಗಳು ಸಹಕಾರ ನೀಡಿವೆ.