ನಾಪೋಕ್ಲು ಸೆ.5 : ನಾಪೋಕ್ಲು ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳ
ತೋಟದ ಮಾಲೀಕರು ತಮ್ಮ ತಮ್ಮ ತೋಟಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರ ರಾಜ್ಯ
ಹಾಗೂ ಹೊರ ಜಿಲ್ಲೆಯ ಎಲ್ಲಾ ಕೂಲಿ ಕಾರ್ಮಿಕರ ಬಗ್ಗೆ ಸೂಕ್ತ ಮಾಹಿತಿಯನ್ನು ಠಾಣೆಗೆ ನೀಡಬೇಕು.
ಕೆಲಸಕ್ಕೆ ಸೇರಿಸಿಕೊಳ್ಳುವ ಮೊದಲು ಕಾರ್ಮಿಕರ ವಿಳಾಸ ಮತ್ತು ದಾಖಲಾತಿಗಳನ್ನು
ಪಡೆದುಕೊಳ್ಳುವಂತೆ ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ. ಕಾರ್ಮಿಕರ ಕುಟುಂಬದ ಸದಸ್ಯರ ಸಹಿತ ಠಾಣೆಗೆ ಕರೆತಂದು ಅವರ ವಿವರ ದಾಖಲಾತಿಗಳೊಂದಿಗೆ ನೋಂದಾಯಿಸಬೇಕು. ಈ ಬಗ್ಗೆ
ನಿರ್ಲಕ್ಷ್ಯ ತೋರಿ ಯಾವುದಾದರು ಅಹಿತಕರ ಘಟನೆ ನಡೆದರೆ ತೋಟದ ಮಾಲೀಕರೇ ನೇರ
ಹೊಣೆಗಾರರಾಗುತ್ತಾರೆ ಎಂದು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ. (ವರದಿ : ದುಗ್ಗಳ)