ನಾಪೋಕ್ಲು ಸೆ.14 : ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದ ಕ್ಲಸ್ಟರ್ ಹಂತದ ಕನ್ನಡ ಭಾಷಣ, ಧಾರ್ಮಿಕ ಪಠಣ, ಭಾವಗೀತೆ ಛದ್ಮವೇಶ, ಚಿತ್ರಕಲೆ, ಚರ್ಚಾ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ತಾಲೂಕು ಹಂತದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ತಮ್ಮಯ್ಯ ತಿಳಿಸಿದ್ದಾರೆ.
ಕನ್ನಡ ಭಾಷಣದಲ್ಲಿ ಮಹಮ್ಮದ್, ಧಾರ್ಮಿಕ ಪಠಣ( ಸಂಸ್ಕೃತ) ಶಮಂತ್, ಭಾವಗೀತೆಯಲ್ಲಿ ಬಿಷನ್ ಬಿದ್ದಪ್ಪ,ಛದ್ಮವೇಷದಲ್ಲಿ ರಚನ್ ಎಚ್.ಎಂ,ಚಿತ್ರಕಲೆಯಲ್ಲಿ ಯುಕ್ತ ಪೊನ್ನಮ್ಮ, ಚರ್ಚಾ ಸ್ಪರ್ಧೆಯಲ್ಲಿ ಶರಣ್ಯ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಮಂತ್ ಮತ್ತು ದರ್ಶ ದೇಚಮ್ಮ ತಂಡ ಪ್ರಥಮ ಸ್ಥಾನ ಗಳಿಸಿದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
5-7 ವಿಭಾಗದ ಸಂಸ್ಕೃತ ಧಾರ್ಮಿಕ ಪಠಣ(ಸಂಸ್ಕೃತ)ದಲ್ಲಿ ಶಾನ್ ದೇವಯ್ಯ ಪ್ರಥಮ ಸ್ಥಾನ ಗಳಿಸಿದರೆ, 1-4 ವಿಭಾಗದ ಲಘು ಸಂಗೀತ, ಛದ್ಮವೇಷ, ಕಥೆ ಹೇಳುವುದು, ಚಿತ್ರಕಲೆ, ಭಕ್ತಿಗೀತೆ ಹಾಗೂ ಅಭಿನಯ ಗೀತೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದಾರೆ.
ಲಘು ಸಂಗೀತದಲ್ಲಿ ಸಮರ್ಥ್ ದೇಸಾಯಿ, ಛದ್ಮ ವೇಷದಲ್ಲಿ ಆಶುಲಾದಿ, ಕಥೆ ಹೇಳುವುದರಲ್ಲಿ ಸಮರ್ಥ್ ದೇಸಾಯಿ, ಚಿತ್ರಕಲೆಯಲ್ಲಿ ಶಾಯರಿ ತಂಗಮ್ಮ,ಭಕ್ತಿಗೀತೆಯಲ್ಲಿ ಆರ್.ಅಕುಲ್ ಹಾಗೂ ಅಭಿನಯ ಗೀತೆಯಲ್ಲಿ ದೀಕ್ಷಾ ಪ್ರಥಮ ಸ್ಥಾನ ಗಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ