ಮೂರ್ನಾಡು ಸೆ.14 : 2023-24ನೇ ಸಾಲಿನ ಮೂರ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮದಲ್ಲಿ ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಪ್ರೌಢಶಾಲಾ ವಿಭಾಗದ ಜನಪದ ಗೀತೆಯಲ್ಲಿ ಸುಧೀಕ್ಷ ಗಣಪತಿ, ಸುಂಸ್ಕೃತ ಮತ್ತು ಧಾರ್ಮಿಕ ಪಠಣ ಭೂಮಿಕ ಭಟ್, ಆಶುಭಾಷಣ ಜಯ ಸ್ವರೂಪ್, ಛದ್ಮವೇಷ ವಿ.ವಿ. ಭಾರ್ಗವಿ, ಚರ್ಚಾಸ್ಪರ್ಧೆ ಎ.ಬಿ. ಕೃತಿಕ, ಹಿಂದಿ ಭಾಷಣ ಲಹರಿ ತಮ್ಮಯ್ಯ, ಕನ್ನಡ ಭಾಷಣ ಪಿ.ವಿ. ಜೀವಿತ, ಕ್ವಿಜ್‍ನಲ್ಲಿ ಎಂ.ಬಿ. ಯಶ್ಮಿತ ಮತ್ತು ಪಿ.ವಿ. ಜೀವಿತ, ಭರತನಾಟ್ಯ ಟಿ.ಎನ್. ಅನುಪದ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಸ್ಪರ್ಧೆಗಳಲ್ಲಿ ಕ್ಲೈ ಮಾಡೆಲಿಂಗ್ ಪ್ರಧಾನ್ ಬಸಪ್ಪ, ಸುಂಸ್ಕೃತ ಮತ್ತು ಧಾರ್ಮಿಕ ಪಠಣದಲ್ಲಿ ಯು.ಆರ್. ನಿಹಾರಿಕ ಹಾಗೂ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ಸ್ಪರ್ಧೆಗಳಲ್ಲಿ ಭಕ್ತಿಗೀತೆ ಶ್ರದ್ಧಾ, ಕಥೆ ಹೇಳುವುದು ಬಿ.ಸಿ. ಹಿಮಾನಿ, ಅಭಿನಯ ಗೀತೆ ಸಿ.ಸಿ. ದೀಕ್ಷಾ, ಕ್ಲೈ ಮಾಡೆಲಿಂಗ್ ಧನ್ವಿತ, ಸುಂಸ್ಕೃತ ಮತ್ತು ಧಾರ್ಮಿಕ ಪಠಣದಲ್ಲಿ ಋತ್ವಿಕಾ ಪೊನ್ನಮ್ಮ ಪ್ರಥಮ ಸ್ಥಾನ ಪಡೆದು ಎಲ್ಲಾ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ.
ಇದಲ್ಲದೆ ಹಿಂದಿ ಕಂಠಪಾಠ, ಲಘು ಸಂಗೀತ, ಛದ್ಮವೇಷ, ರಂಗೋಲಿ, ಆಂಗ್ಲ ಭಾಷಣ, ಆಶು ಭಾಷಣ ಮತ್ತು ಚಿತ್ರಕಲೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ಶಾಲಾ ಸಭಾಂಗಣದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶೀಲಾ ಅಬ್ದುಲ್ಲಾ, ದೈಹಿಕ ಶಿಕ್ಷಕ ಅಶೋಕ್ ಮತ್ತು ಶಿಕ್ಷಕ ವೃಂದ ಹಾಜರಿದ್ದರು.
ವರದಿ : ಟಿ.ಸಿ. ನಾಗರಾಜ್, ಮೂರ್ನಾಡು