ಮಡಿಕೇರಿ ಸೆ.23 : ಮಾಸ್ಟರ್ ಮೈಂಡ್ ಚೆಸ್ ಸ್ಕೂಲ್ ವತಿಯಿಂದ ಅ.8 ರಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಕೊಡಗು ಜಿಲ್ಲಾ ಮಟ್ಟದ ಚದುರಂಗದ ಆಟ ಪಂದ್ಯಾವಳಿ ನಡೆಯಲಿದೆ.
ಅಕ್ಟೋಬರ್, 08 ರಂದು ಬೆಳಗ್ಗೆ 9 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಚೆಸ್ ಆಟಗಾರರು ತಮ್ಮ ಸ್ವಂತ ಚೆಸ್ ಸೆಟ್‍ಗಳನ್ನು ತರಬೇಕು. ಪ್ರವೇಶ ಶುಲ್ಕ ರೂ.300, ಆಟಗಾರರು ಅಕ್ಟೋಬರ್, 08 ರಂದು ಬೆಳಗ್ಗೆ 9.30 ರೊಳಗೆ ಹಾಜರಿರಬೇಕು. 1 ನೇ ಸುತ್ತು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ನೋಂದಣಿಗೆ ಅಗತ್ಯವಿರುವ ದಾಖಲೆಗಳಾದ ಹೆಸರು, ಜನ್ಮ ದಿನಾಂಕದ ಪ್ರಮಾಣಪತ್ರ, ಆಧಾರ್ ಕಾರ್ಡ್, ಶಾಲೆಯ ಹೆಸರು ಮತ್ತು ಶುಲ್ಕ ಪಾವತಿಯ ಸ್ಕ್ರೀನ್‍ಶಾಟ್, ವಿವರಗಳನ್ನು 6361643024 ಗೆ ವಾಟ್ಸಾಪ್ ಮಾಡಬೇಕು. ಹೆಚ್ಚಿನ ಮಾಹಿತಿಗೆ 6361643024 ನ್ನು ಸಂಪರ್ಕಿಸಬಹುದು.









