ನಾಪೋಕ್ಲು ಸೆ.23 : ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳು ಕಡಿಮೆ ದರದಲ್ಲಿ ಲಭಿಸುತ್ತಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರ ವಹಿವಾಟು ನಡೆಸುವುದರ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ಪಟ್ರಪಂಡ.ಎ ಮುದ್ದಪ್ಪ ಮನವಿ ಮಾಡಿದರು.
ನಾಪೋಕ್ಲುವಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಂಘದ 2022-23ರ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಂಘದ ನೂತನ ಕಟ್ಟಡದಲ್ಲಿ ಎಂಟು ಕೊಠಡಿಗಳಿದ್ದು, ಮಾಸಿಕ 90 ಸಾವಿರ ರೂ. ಬಾಡಿಗೆ ಲಭಿಸುತ್ತಿದೆ. ಇದರೊಂದಿಗೆ ವ್ಯಾಪಾರ-ವಹಿವಾಟು ವೃದ್ಧಿಸಿದರೆ ಸಂಘದ ಅಭಿವೃದ್ದಿ ಸಾಧ್ಯ ಎಂದರು.
ಮಹಾಸಭೆಯಲ್ಲಿ ಉಪಾಧ್ಯಕ್ಷೆ ನಾಟೋಳಂಡ ಕಸ್ತೂರಿ ಉತ್ತಪ್ಪ, ನಿರ್ದೇಶಕರಾದ ಕೊಂಬಂಡ ಕೆ. ಗಣೇಶ್, ಕುಲ್ಲೇಟಿರ ಅರುಣ್ ಬೇಬ, ನಾಯಕಂಡ ಟಿ. ಮುತ್ತಪ್ಪ,ಬೊಟ್ಟೋಳಂಡ ಕೆ.ಕುಟ್ಟಪ್ಪ ,ಪಾಡಿಯಮ್ಮಂಡ ಮಹೇಶ್,ಕೇಟೋಳಿರ ಜಿ.ಮುತ್ತಮ್ಮ,ಹೆಚ್.ಎ.ಬೊಳ್ಳು,ಜಿ.ಆರ್. ರಾಮಣ್ಣ ಉಪಸ್ಥಿತರಿದ್ದರು ಕಾರ್ಯದರ್ಶಿ ಕೆ.ಎಸ್ ತಿಮಯ್ಯ ಸ್ವಾಗತಿಸಿ ವಂದಿಸಿದರು.
ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಲಾಯಿತು.
ಈ ಸಂದರ್ಭ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಭೆಯಲ್ಲಿ ಚರ್ಚೆಗಳು ಜರುಗಿ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ಅಂತಿಮವಾಗಿ ಅಭಿವೃದ್ಧಿಗೆ ಪೂರಕವಾದ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಯಿತು.
ವರದಿ : ದುಗ್ಗಳ ಸದಾನಂದ