ನಾಪೋಕ್ಲು ಸೆ.23 : ನಾಪೋಕ್ಲು ಪಟ್ಟಣದಲ್ಲಿ ಗಣೇಶೋತ್ಸವದ ಅಂಗವಾಗಿ ಗಣೇಶ್ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಇರುವುದರಿಂದ ಸಾರ್ವಜನಿಕರು ಹಾಗೂ ಸಮಿತಿ ಸದಸ್ಯರು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಪ್ರಕಟಣೆ ಹೊರಡಿಸಿದ್ದಾರೆ.
ಇ0ದಿರಾ ನಗರದ ವಿವೇಕಾನಂದ ಗಣೇಶೋತ್ಸವ ಸೇವಾ ಸಮಿತಿ, ಹಳೆ ತಾಲೂಕಿನ ಪೊನ್ನು ಮುತ್ತಪ್ಪ ವಿನಾಯಕ ಸೇವಾ ಸಮಿತಿ, ಪಟ್ಟಣದ ರಾಮಮಂದಿರ ದೇವಸ್ಥಾನ ಸಮಿತಿ, ಹಳೆ ತಾಲೂಕು ಭಗವತಿ ದೇವಸ್ಥಾನದ ಗಣೇಶೋತ್ಸವ ಸಮಿತಿ ಹಾಗೂ ಕಕ್ಕುಂದ ಕಾಡು ವೆಂಕಟೇಶ್ವರ ದೇವಸ್ಥಾನದ ಗಣೇಶ ಮೂರ್ತಿಯ ಮೆರವಣಿಗೆಯೂ ಪಟ್ಟಣದ ಮಾರ್ಗವಾಗಿ ಕಾರೆಕಾಡು ಬಳಿಯ ಕಾವೇರಿ ಹೊಳೆಗೆ ತೆರಳುವುದರಿಂದ ಪಟ್ಟಣದ ಹಳೆ ತಾಲೂಕಿನಿಂದ ಮಾರುಕಟ್ಟೆ ವರೆಗೆ ಹಾಗೂ ನಾಪೋಕ್ಲು ಬಸ್ ನಿಲ್ದಾಣದಿಂದ ಬೇತು ರಸ್ತೆಯ ಮಕ್ಕಿ ದೇವಸ್ಥಾನದ ಕಮಾನುಗೇಟ್ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡದಂತೆ ಪೊಲೀಸ್ ಇಲಾಖೆಯ ಪ್ರಕಟಣೆ ಕೋರಿದೆ.
ವರದಿ : ದುಗ್ಗಳ ಸದಾನಂದ









