ಮಡಿಕೇರಿ ಸೆ.23 : ಸರ್ಕಾರಿ ದಾಖಲೆಗಳಲ್ಲಿ ಕೊಡಗರು ಅಥವಾ ಕೊಡವರು ಪದ ಬಳಕೆಗೆ ಬದಲಾಗಿ “ಕೊಡವ” ಎಂದು ಬಳಕೆ ಮಾಡಲು ರಾಜ್ಯ ಸಚಿವ ಸಂಪುಟದ ಸಭೆ ಅನುಮೋದನೆ ನೀಡಿದೆ.
ದಾಖಲೆಗಳಲ್ಲಿ ಕೊಡಗರು ಅಥವಾ ಕೊಡವರು ಎನ್ನುವ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ “ಕೊಡವ” ಶಾಸ್ತ್ರೀಯ ಪದ ಬಳಕೆಗಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರತರವಾಗಿ ಹೋರಾಟ ನಡೆಸುತ್ತಾ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಸಹಕಾರದೊಂದಿಗೆ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು “ಕೊಡವ” ಪದ ಬಳಕೆಗೆ ಸಚಿವ ಸಂಪುಟದ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ನಾಚಪ್ಪ ಅವರು, ಇದು ಸಿಎನ್‍ಸಿ ಹೋರಾಟದ ಫಲವಾಗಿದ್ದು, ಯಶಸ್ಸಿನ ಚಾರಿತ್ರಿಕ ಮೈಲುಗಲ್ಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
“ಕೊಡವ” ಪದವನ್ನು ಕ್ಯಾಬಿನೆಟ್ ನಿರ್ಣಯದ ಮೂಲಕ ಅಧಿಕೃತಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. “ಕೊಡವ” ಎನ್ನುವ ಉಜ್ವಲ ಶಾಸ್ತ್ರೀಯ ನಾಮಕ್ಕೆ ಶಾಸನಬದ್ಧ ಸ್ಥಿರೀಕರಣ ದೊರೆತ್ತಿದ್ದು, ಇದು ಸಿಎನ್‍ಸಿಯ ಮಹತ್ವದ ಮೈಲುಗಲ್ಲಾಗಿದೆ.
ಕೊಡವರನ್ನು “ಕೊಡವ” ಎಂದು ನಮೂದಿಸದೆ “ಕೊಡಗರು” ಎಂದು ನಮೂದಿಸುವ ಮೂಲಕ ಕೊಡವ ಬುಡಕಟ್ಟು ಆದಿಮ ಸಂಜಾತ ಮೂಲನಿವಾಸಿಗಳ ಅಸ್ತಿತ್ವದ ಬಗ್ಗೆ ಆತಂಕ ಮೂಡಿಸಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಿಎನ್‍ಸಿ ಸಂಘಟನೆ 2008 ರಿಂದಲೇ ಹೋರಾಟವನ್ನು ಆರಂಭಿಸಿತು. ಕೊಡವರ ಭಾವನೆಯನ್ನು ಅರ್ಥ ಮಾಡಿಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸುವ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಆಡಳಿತ ವ್ಯವಸ್ಥೆಗಳು ಇಲ್ಲಿಯವರೆಗೆ ಮಾಡಿರಲಿಲ್ಲ.
ಆದರೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕ್ಯಾಬಿನೆಟ್ ಸಭೆಯಲ್ಲಿ ಕೊಡವರನ್ನು “ಕೊಡವ” ಎಂದು ನಮೂದಿಸುವ ಕುರಿತು ಅನುಮೋದನೆ ದೊರೆತ್ತಿದೆ. ಇದು ನಮಗೆ ಸಿಕ್ಕ ದೊಡ್ಡ ಜಯವಾಗಿದ್ದು, ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಶಿವರಾಜ್ ತಂಗಂಡಗಿ, ಶಾಸಕ ಎ.ಎಸ್.ಪೊನ್ನಣ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರುಗಳಾಗಿದ್ದ ಸಮಾಜ ವಿಜ್ಞಾನಿ ಡಾ.ದ್ವಾರಕನಾಥ್, ಡಾ.ಜಯಪ್ರಕಾಶ್ ಹೆಗ್ಡೆ, ಹೈಕೋರ್ಟ್ ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ನ್ಯಾಯವಾದಿ ಬಲ್ಲಚಂಡ ಬೆಳ್ಳಿಯಪ್ಪ, ಸುದೀರ್ಘ ಹೋರಾಟದಲ್ಲಿ ಕೈಜೋಡಿಸಿದ ಸಿಎನ್‍ಸಿ ಸ್ವಯಂ ಸೇವಕರು, ಅಭಿಮಾನಿಗಳು, ಪರೋಕ್ಷ ಮತ್ತು ನೇರವಾಗಿ ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
2008 ರಲ್ಲಿ ಡಾ.ದ್ವಾರಕಾನಾಥ್ ನೇತೃತ್ವದ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. 2009 ರಲ್ಲಿ ಆಯೋಗವು ಕೊಡಗಿಗೆ ಭೇಟಿ ನೀಡಿತು. (ಇದನ್ನು ವಿಫಲಗೊಳಿಸಲು ಅವರು ತಂಗಿದ್ದ ಅತಿಥಿ ಗೃಹದಲ್ಲಿ ಅವರ ಮೇಲೆ ಹಲ್ಲೆ ಯತ್ನ ನಡೆಸಿ ಅವರನ್ನು ಅಪಮಾನಿಸಲಾಯಿತು. ಆದರೂ ಅವರು ಕೊಟ್ಟ ಭರವಸೆಯಂತೆ ನಡೆದುಕೊಂಡರು) ಆಯೋಗದ ಕರೆಯ ಮೇರೆಗೆ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ಅವರೊಂದಿಗಿನ ತಂಡ ಬೆಂಗಳೂರಿನಲ್ಲಿರುವ ಆಯೋಗದ ಕಚೇರಿಯಲ್ಲಿನ ನ್ಯಾಯಾಲಯದಲ್ಲಿ ಕೊಡವ ಪದ ಬಳಕೆಯ ಸಮಗ್ರ ಚಾರಿತ್ರಿಕ ಹಿನ್ನೆಲೆ ಮತ್ತು ದಾಖಲಾತಿಯೊಂದಿಗೆ ಜ್ಞಾಪನಾ ಪತ್ರ ಸಲ್ಲಿಸಿತು. 2010 ರಲ್ಲಿ ಡಾ.ದ್ವಾರಕಾನಾಥ್ ಆಯೋಗ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ‘ಕೊಡಗರು’ ಬದಲಿಗೆ ನಮ್ಮ “ಕೊಡವ” ಪದ ಬಳಕೆಗೆ ಶಿಫಾರಸ್ಸು ಮಾಡಿತು. ಇದಕ್ಕೆ ಸ್ಪಂದನೆ ಸಿಗದೆ ಇದ್ದಾಗ 2014 ರಲ್ಲಿ ಸಿಎನ್‍ಸಿ ಹೈಕೋಟ್ರ್ನಲ್ಲಿ ಅರ್ಜಿ ಸಲ್ಲಿಸಿತು. 2016 ರಲ್ಲಿ ಹೈಕೋರ್ಟ್‍ನಲ್ಲಿ ನ್ಯಾಯಾಂಗ ನಿಂದನೆಯನ್ನು ಸಲ್ಲಿಸಿತಾದರೂ ಯಾವುದೇ ಸ್ಪಂದನೆ ದೊರೆಯದೆ ಆದೇಶದ ಪ್ರತಿ ಕಸದ ಬುಟ್ಟಿ ಸೇರಿತು. 2018 ರಲ್ಲಿ ಮತ್ತೆ ಕೊಡವ ನ್ಯಾಷನಲ್ ಕೌನ್ಸಿಲ್ ಕೋರ್ಟ್ ಮೊರೆ ಹೋಯಿತು.
2021 ಡಿ.8 ರಂದು ಹೈಕೋಟ್ರ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಪೀಠವು “ಕೊಡಗರು” ಬದಲಿಗೆ “ಕೊಡವ” ಪದ ಬಳಸುವಂತೆ ಮಹತ್ವದ ತೀರ್ಪು ನೀಡಿತು. 2022 ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ನ್ಯಾಯಾಲಯದ ಆದೇಶದೊಂದಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸಲಾಯಿತು. ನಂತರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಮೂಲಕ ಅಂದಿನ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ತಲುಪಿತು. ಆದರೆ ಸರ್ಕಾರ ಬದ್ಧತೆ ತೋರದೆ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿತು. ಈ ಬೆಳವಣಿಗೆ ಕೊಡವರ ಭಾವನೆಗೆ ಧಕ್ಕೆಯನ್ನುಂಟು ಮಾಡಿತ್ತು ಎಂದು ನಾಚಪ್ಪ ತಿಳಿಸಿದರು.
ಸಿಎನ್‍ಸಿ ತನ್ನ ನ್ಯಾಯಾಂಗ ಮತ್ತು ರಾಜಕೀಯ ಹೋರಾಟವನ್ನು ಮುಂದುವರೆಸಿತು. ಇಂದಿನ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮರ್ಥ ಅಧ್ಯಕ್ಷ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅವರನ್ನು ಈ ಸಂಬಂಧ ಅನೇಕ ಬಾರಿ ಭೇಟಿ ಮಾಡಲಾಯಿತು.
ನೇರ ನಡೆ ನುಡಿಯ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಅವರು ಈ ಕುರಿತು ವೈಯಕ್ತಿಕ ಆಸಕ್ತಿ ವಹಿಸಿದರು. ಒಂದಕ್ಕಿಂತ ಹೆಚ್ಚು ಬಾರಿ ಎಲ್ಲಾ ಕಾರ್ಯದರ್ಶಿಗಳ ಸಭೆಯನ್ನು ಕರೆದರು, ಹೈಕೋರ್ಟ್ ತೀರ್ಪಿನ ವಿಚಾರದಲ್ಲಿ ಕೊಡವರ ವಿರುದ್ಧ ಮೇಲ್ಮನವಿ ಹೋಗಬಾರದೆಂದು ತಾಕೀತು ಮಾಡಿದರು.
ಇದೇ ವೇಳೆ ಅದೃಷ್ಟವಶಾತ್ ನಮ್ಮ ಸ್ನೇಹಿತ ಎ.ಎಸ್.ಪೊನ್ನಣ್ಣ ರವರು ಕೊಡವ ಹೃದಯಭಾಗದಿಂದ ಚುನಾಯಿತರಾದರು. ಅವರು ನಮ್ಮ ಜನಾಂಗೀಯ ಗುರುತಿನ ನ್ಯಾಯಸಮ್ಮತವಾದ ಸಮಸ್ಯೆಯನ್ನು ಪರಿಹರಿಸಲು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಅತ್ಯಂತ ಸೂಕ್ಷ್ಮ ಕೊಡವ ಸಮುದಾಯದ ಶಾಸನ ಬದ್ಧ ಹಕ್ಕುಗಳನ್ನ ಪರಿಗಣಿಸಿ ಗೌರವಿಸುವ ಮೂಲಕ ಅವರ ಸಮಾಜಿಕ ನ್ಯಾಯ, ಚಿಂತನೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದಾರೆ. ಈಗ ಅಂತಿಮವಾಗಿ ನಮಗೆ ಸಮಾಧಾನ ಮತ್ತು ನೆಮ್ಮದಿ ಸಿಕ್ಕಿದೆ ಎಂದು ನಾಚಪ್ಪ ಹೇಳಿದರು.
ಕ್ಯಾಬಿನೇಟ್ ಅನುಮೋದನೆ ನೀಡಿದ “ಕೊಡವ” ಶಾಸ್ತ್ರೀಯ ನಾಮಕ್ಕೆ ಇನ್ನು ಒಂದೆರಡು ದಿನಗಳಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಟು “ಕೊಡವ” ಪದ ಬಳಕೆ ಅಧಿಕೃತ ಶಾಸನ ಬದ್ಧಗೊಳ್ಳಲಿದೆ ಎಂದರು.
27 ಜುಲೈ 2023 ರಂದು ನಡೆದ ಕ್ಯಾಬಿನೆಟ್ ಸಭೆಯು ‘ಕೊಡವ ಜಾನಪದ’ ಪದದ ಮರುಸ್ಥಾಪನೆಗೆ ಒಪ್ಪಿಗೆ ನೀಡಿತು. ಆದರೆ ಎರಡೂ ನಾಮಕರಣಗಳು ಇದ್ದವು ಅಂದರೆ ‘ಕೊಡವ ಏಕವಚನ’ ಮತ್ತು ‘ಕೊಡವರು ಬಹುವಚನ’ ಎರಡನ್ನು ಪುನಃಸ್ಥಾಪಿಸಲಾಯಿತು.
ಈ ಕುರಿತು ‘ಕೊಡವ ಏಕವಚನ’ ಪದವನ್ನು ಮಾತ್ರ ಉಳಿಸಿಕೊಳ್ಳಬೇಕೆಂದು ಮತ್ತೊಮ್ಮೆ ಸಿಎನ್‍ಸಿ ಅಧ್ಯಕ್ಷರಾದ ಎನ್.ಯು.ನಾಚಪ್ಪ ಕೊಡವ ಅವರು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರಿಗೆ, ಶಾಸಕರಾದ ಎ.ಎಸ್.ಪೊನ್ನಣ್ಣ ರವರಿಗೆ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ (ಕೆಎಸ್‍ಬಿಸಿ)ಯ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರಿಗೆ ಮನವಿ ಮಾಡಿದರು. ಅವರು ಸಿಎನ್‍ಸಿ ಯ ಮನವಿಗೆ ಪ್ರತಿಯಾಗಿ ಮತ್ತು ಇಂದು “ಕೊಡವರು” ಎಂಬ ಬಹುವಚನ ನಾಮಕರಣವನ್ನು ಕೈಬಿಡುವ ಮೂಲಕ “ಕೊಡವ” ಏಕವಚನ ನಾಮಕರಣ ಉಚ್ಚಾರಣೆಯನ್ನು ಮಾತ್ರ ಮರುಸ್ಥಾಪಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಕೊಡವ ಬುಡಕಟ್ಟು ಪ್ರಪಂಚದ ಅದಮ್ಯ ಧ್ವನಿಯಾದ ಕೊಡವ ನ್ಯಾಷನಲ್ ಕೌನ್ಸಿಲ್ “ಕೊಡವ ಶಾಸ್ತ್ರೀಯ” ನಾಮಕರಣವು ಕೊಡಗರು ಎಂದು ಅಶ್ಲೀಲಗೊಂಡಿರುವುದನ್ನು ಬದಲಿಸಿ ಜನಪದವು ಪ್ರಾಚೀನವುವಾದ ‘ಕೊಡವ’ ಶಾಸ್ತ್ರೀಯವಾದ ನಾಮವನ್ನು ಮರು ಸ್ಥಾಪಿಸಬೇಕೆಂಬ ಹಕ್ಕೊತ್ತಯವನ್ನು 2008 ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ಕೆಎಸ್‍ಬಿಸಿ)ಕ್ಕೆ ಸಲ್ಲಿಸುವ ಮೂಲಕ ಆಂದೋಲನ ಪ್ರಾರಂಭಿಸಲಾಯಿತು.
ಅದೃಷ್ಟವಶಾತ್ ಅಂದಿನ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೂ, ನಮ್ಮ ಬಹುಕಾಲದ ಗೆಳೆಯ ಮತ್ತು ಅಪ್ರತಿಮ ಸಮಾಜ ವಿಜ್ಞಾನಿ ಡಾ. ಸಿ.ಎಸ್.ದ್ವಾರಕನಾಥ್ ರವರಾಗಿದ್ದರು. ಆ ಸಂದರ್ಭ ಶ್ರೀಯುತರು ನಮ್ಮ ಪ್ರಕರಣದ ಗಂಭೀರತೆಯನ್ನು ಖಚಿತಪಡಿಸಿಕೊಳ್ಳಲು ಕೊಡವ ಸೀಮೆ ಕೂರ್ಗ್‍ಗೆ ಆಯೋಗದ ಮುಖ್ಯಸ್ಥರು ಮತ್ತು ಸದಸ್ಯರು ಭೇಟಿ ನೀಡಿ ವಿಷಯದ ನ್ಯಾಯಸಮ್ಮತತೆಯನ್ನು ಗ್ರಹಿಸಿದರು ಮತ್ತು ನಮ್ಮ ಬೇಡಿಕೆಯನ್ನು ಶಿಫಾರಸು ಮಾಡಲು ಸಹಾಯ ಮಾಡಿದರು. ಶ್ರೀಯುತರು ಸಿಎನ್‍ಸಿ ಅಧ್ಯಕ್ಷರನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ (ಕೆಎಸ್‍ಬಿಸಿ) ಬೆಂಗಳೂರಿನ ತೆರೆದ ನ್ಯಾಯಾಲಯಕ್ಕೆ ಕರೆಯಿಸಿ ನ್ಯಾಯಾಲಯದ ಸಾಕ್ಷಿ ಕಟಕಟೆಯಲ್ಲಿ ಸಿಎನ್‍ಸಿ ಅಧ್ಯಕ್ಷರಾದ ಶ್ರಿ ಎನ್.ಯು ನಾಚಪ್ಪ ಕೊಡವ ಅವರಿಂದ ಸುಧೀರ್ಘ ಪ್ರಮಾಣ ಪತ್ರ ಪಡೆದುಕೊಂಡರು.
ಸಿಎನ್‍ಸಿ ಸಲ್ಲಿಸಿದ ಅಫಿಡವಿಟ್/ಪ್ರಮಾಣ ಪತ್ರದ ನಿಖರತೆಯ ಆಧಾರದ ಮೇಲೆ ಕೊಡವರ ಜಾನಪದ ಮತ್ತು ಶಾಸ್ತ್ರೀಯ ನಾಮಕರಣವನ್ನು ಚಿತ್ರಿಸುವ ಕಿರುಪುಸ್ತಕವನ್ನು ಸಿದ್ಧಪಡಿಸಲಾಯಿತು. ಜೂನ್ ತಿಂಗಳು 2010ರಲ್ಲಿ ಸರ್ಕಾರಕ್ಕೆ ಕೊಡವರ ಪರ ಡಾ.ದ್ವಾರಕನಾಥ್ ಆಯೋಗ ಶಿಫಾರಸ್ಸಿನ ವರದಿಯನ್ನು ಸಲ್ಲಿಸಿತು.
ಯಡಿಯೂರಪ್ಪ ಸರ್ಕಾರ ವರದಿ ಸ್ವೀಕರಿಸಿ ಜಿಒ (ಸರ್ಕಾರಿ ಆದೇಶ) ಹೊರಡಿಸಿದೆ. ಆದರೆ ಕೆಲವು ಅನಪೇಕ್ಷಿತ ಶಕ್ತಿಗಳ ಸಂಚಿನ ಕಾರಣ GO ಅನ್ನು ಗೆಜೆಟ್ ಅಧಿಸೂಚನೆಯಲ್ಲಿ ನಮೂದಿಸಲಾಗಿಲ್ಲ. ಆದ್ದರಿಂದ ಸಿಎನ್‍ಸಿ ನಮ್ಮ ವಕೀಲರಾದ ಬಲ್ಲಚಂಡ ಬೊಳ್ಳಿಯಪ್ಪ ರವರ ಮೂಲಕ ಈ ಗಂಭೀರ ಆಡಳಿತಾತ್ಮಕ ಉಲ್ಲಂಘನೆಯ ತೀರ್ಪುಗಾಗಿ ಗೌರವಾನ್ವಿತ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿತು.
ಗೌರವಾನ್ವಿತ ನ್ಯಾಯಮೂರ್ತಿ ನಜೀರ್ ಅವರು ಜಿಒ ಅನುಷ್ಠಾನಕ್ಕೆ ಆದೇಶಿಸಿದರು.
ಆದರೆ ಹೈಕೋರ್ಟ್ ಆದೇಶ ಜಾರಿಗೆ ತರಲು ಸರ್ಕಾರ ಹಿಂದೇಟು ಹಾಕಿತು. ಮತ್ತೆ ಸಿಎನ್‍ಸಿ ಸರ್ಕಾರದ ವಿರುದ್ಧ ನ್ಯಾಯಲಯ ನಿಂದನೆ/ಅವಹೇಳನ ಪ್ರಕ್ರಿಯೆ ಆರಂಭಿಸಿತು. ಸರ್ಕಾರ ಮತ್ತು ಕೆಎಸ್‍ಬಿಸಿ ಅವಹೇಳನ ಪ್ರಕ್ರಿಯೆಯ ಆದೇಶವನ್ನು ಸಹ ಉಲ್ಲಂಘಿಸಿತು.
ಮತ್ತೆ ಸಿಎನ್‍ಸಿ ಹೊಸದಾಗಿ ಅರ್ಜಿ ಸಲ್ಲಿಸುವ ಮೂಲಕ ಕರ್ನಾಟಕದ ಗೌರವಾನ್ವಿತ ಹೈಕೋರ್ಟ್‍ಗೆ ಮೊರೆ ಹೋಗಿದೆ.
ಅಂತಿಮವಾಗಿ 2021 ಡಿ.8 ರಂದು ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಪೀಠವು ಕೊಡವ ಶಾಸ್ತ್ರೀಯ ನಾಮಕರಣವನ್ನು ಮರುಸ್ಥಾಪಿಸಲು ಚಾರಿತ್ರಿಕ ತೀರ್ಪನ್ನು (ಲ್ಯಾಂಡ್ ಮಾರ್ಕ್) ಘೋಷಿಸಿದರು.
ಕೊಡವರು ರಾಷ್ಟ್ರ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸಿದವರು ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಅವರ ಅಪಾರ ಕೊಡುಗೆಯನ್ನು ದುರ್ಬಲಗೊಳಿಸಬಾರದು ಮತ್ತು ಅಗೌರವಗೊಳಿಸಬಾರದು, ಸರ್ಕಾರವು ವಸಾಹತುಶಾಹಿ ಆಡಳಿತಗಾರರಂತೆ ವರ್ತಿಸಬಾರದು ಎಂದು ಅದು ಅಭಿಪ್ರಾಯಪಟ್ಟಿದೆ.
ಈ ಎಲ್ಲಾ ತೀರ್ಪುಗಳು, ಸಿಎನ್‍ಸಿ ಯ ಅಸಂಖ್ಯಾತ ಅರ್ಜಿಗಳು ಮತ್ತು ಮೆಮೊರಾಂಡಮ್‍ಗಳ ಹೊರತಾಗಿಯೂ, ಹಿಂದಿನ ರಾಜ್ಯ ಸರ್ಕಾರವನ್ನು ಮುನ್ನಡೆಸುತ್ತಿದ್ದ ಕೊಡವ ಸ್ನೇಹಿ ಸರ್ಕಾರ ಎಂದು ಕರೆಯಲ್ಪಡುವ ಕೊಡವ ಜನಾಂಗದ ಪರವಾಗಿ ಈ ಸಂಬಂಧ ಎಂದೆಂದಿಗೂ ಕಾಳಜಿ ವಹಿಸಲಿಲ್ಲ.
ಸಿಎನ್‍ಸಿ ತನ್ನ ನ್ಯಾಯಾಂಗ ಮತ್ತು ರಾಜಕೀಯ ಹೋರಾಟವನ್ನು ಮುಂದುವರೆಸಿತು. ಇಂದಿನ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮರ್ಥ ಅಧ್ಯಕ್ಷ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರವರನ್ನು ಈ ಸಂಬಂಧ ಅನೇಕ ಬಾರಿ ಭೇಟಿ ಮಾಡಲಾಯಿತು.
ನೇರ ನಡೆ ನುಡಿಯ ಕೆಎಸ್‍ಬಿಸಿ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆಯವರು ಈ ಕುರಿತು ವೈಯಕ್ತಿಕ ಆಸಕ್ತಿ ವಹಿಸಿದರು. ಅವರು ಮುಖ್ಯಮಂತ್ರಿಗಳ ಪೀಠದ ವರೆಗೆ ಅಂತಿಮ ಗಮ್ಯ ಸ್ಥಾನಕ್ಕೆ ‘ಕೊಡವ’ ಕಡತ ಡೆಸ್ಕ್‍ನಿಂದ ಡೆಸ್ಕ್ ಮೂಲಕ ತಲುಪಲು ವಿವಿಧ ಸ್ಥರಗಳ ಆಡಳಿತ ಸ್ಥಂಭಗಳ ಮನವೊಲಿಸುವಲ್ಲಿ ಜಾಗೃತಿ ವಹಿಸಿದರು.
ಒಂದಕ್ಕಿಂತ ಹೆಚ್ಚು ಬಾರಿ ಎಲ್ಲಾ ಕಾರ್ಯದರ್ಶಿಗಳ ಸಭೆಯನ್ನು ಕರೆದರು, ಹೈಕೋರ್ಟ್ ತೀರ್ಪಿನ ವಿಚಾರದಲ್ಲಿ ಕೊಡವರ ವಿರುದ್ಧ ಮೇಲ್ಮನವಿ ಹೋಗಬಾರದೆಂದು ತಾಕೀತು ಮಾಡಿದರು.
ಇದೇ ವೇಳೆ ಅದೃಷ್ಟವಶಾತ್ ನಮ್ಮ ಸ್ನೇಹಿತ ಎ.ಎಸ್.ಪೊನ್ನಣ್ಣ ರವರು ಕೊಡವ ಹೃದಯಭಾಗದಿಂದ ಚುನಾಯಿತರಾದರು. ಅವರು ನಮ್ಮ ಜನಾಂಗೀಯ ಗುರುತಿನ ನ್ಯಾಯಸಮ್ಮತವಾದ ಸಮಸ್ಯೆಯನ್ನು ಪರಿಹರಿಸಲು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಅತ್ಯಂತ ಸೂಕ್ಷ್ಮ ಕೊಡವ ಸಮುದಾಯ ಶಾಸನ ಬದ್ಧ ಹಕ್ಕುಗಳನ್ನ ಪರಿಗಣಿಸಿ ಗೌರವಿಸುವ ಮೂಲಕ ಅವರ ಸಮಾಜಿಕ ನ್ಯಾಯ, ಚಿಂತನೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದಾರೆ. ಈಗ ಅಂತಿಮವಾಗಿ ನಮಗೆ ಸಮಾಧಾನ ಮತ್ತು ನೆಮ್ಮದಿ ಸಿಕ್ಕಿದೆ.
ಕ್ಯಾಬಿನೇಟ್ ಅನುಮೋದನೆ ನೀಡಿದ ‘ಕೊಡವ’ ಶಾಸ್ತ್ರೀಯ ನಾಮಕ್ಕೆ ಇನ್ನು ಒಂದೆರಡು ದಿನಗಳಲ್ಲಿ ಗಜೆಟ್ ನೋಟಿಫಿಕೇಷನ್ ಹೊರಟು ‘ಕೊಡವ ಶಾಸ್ತ್ರೀಯ ಪದ’ ಅಧಿಕೃತ ಶಾಸನ ಬದ್ಧಗೊಳ್ಳಲಿದೆ.
ಆತ್ಮೀಯ ಕೊಡವ/ಕೊಡವತಿಯರೇ, ನಮ್ಮ ಸಹೋದರ ಸಹೋದರಿಯರೇ,
ಕೊಡವರು ಒಂದೇ ಜನಾಂಗ, ನಾವು ಜಾತಿ ಅಥವಾ ಪಂಗಡ ಅಲ್ಲ. ಕೊಡವ ಜನಾಂಗದೊಳಗೆ ಯಾವುದೇ ಪಂಥ ಅಥವಾ ಉಪಪಂಗಡವಿಲ್ಲ.
ಜಾತಿ ವ್ಯವಸ್ಥೆ ಒಂದು ವಾಸ್ತವ.
ಆ ವಾಸ್ತವದ ಆಧಾರದ ಮೇಲೆ ಪ್ರಪಂಚದಾದ್ಯಂತದ ಎಲ್ಲಾ ಪ್ರಜಾಪ್ರಭುತ್ವ ಸರ್ಕಾರಗಳು ಮತ್ತು ದೇಶಗಳು ಡೇಟಾವನ್ನು (ಅಂಕಿ-ಸಂಖ್ಯೆ) ಸಂಗ್ರಹಿಸುವ ಮೂಲಕ ತನ್ನ ನಾಗರಿಕರನ್ನು ಸಬಲಗೊಳಿಸುತ್ತಿವೆ, ಅಂದರೆ ಸಂಖ್ಯೆಗಳು, ಅನುಪಾತ ಮತ್ತು ಸಮುದಾಯ ನಾಮಕರಣ. ಆ ಮಾಹಿತಿಯ ಮೂಲಕ ಪ್ರತಿ ಸರ್ಕಾರವು ಕಲ್ಯಾಣ ರಾಜ್ಯ ಯೋಜನೆಗಳನ್ನು ಪ್ರಾರಂಭಿಸುತ್ತದೆ.
ಸಾಂವಿಧಾನಿಕ ಪಾರ್ಲಿಮೆಂಟರಿ ಪಾರ್ಟಿಸಿಪೇಟರಿ ಡೆಮಾಕ್ರಸಿಯಲ್ಲಿ, ಆಡಳಿತದ ಕಾರ್ಯವು ಬಹುತ್ವ ಮತ್ತು ವೈವಿಧ್ಯತೆಯ ತತ್ವದ ಮೇಲೆ ಇರುತ್ತದೆ. ಆದ್ದರಿಂದ ರಾಜ್ಯ ಆಡಳಿತ ನಡೆಸುವ ಪ್ರತಿಯೊಂದು ಸಮುದಾಯದ ಸರಿಯಾದ ಡೇಟಾವನ್ನು(ಅಂಕೆ-ಸಂಖ್ಯೆ) ಸರ್ಕಾರ ಹೊಂದಿರಲೇಬೇಕು.
ಜನಸಂಖ್ಯಾ ವಿಜ್ಞಾನದ ಪ್ರಕಾರ, ಜನಗಣತಿ ಎಣಿಕೆಯು ಯಾವುದೇ ಪ್ರಜಾತಂತ್ರ ವ್ಯವಸ್ಥೆಯ ವಿಶಿಷ್ಟ ಲಕ್ಷಣವಾಗಿದೆ. ರಾಜ್ಯ, ಗಣರಾಜ್ಯ ಮತ್ತು ಕಲ್ಯಾಣ ರಾಜ್ಯದ ಸಿದ್ಧಾಂತವು ಒಟ್ಟಿಗೆ ಸಾಗಬೇಕಾಗುತ್ತದೆ.
ಮದರ್ ಆಫ್ ಡೆಮಾಕ್ರಸಿ ಯುಕೆ/ ಯುನೈಟೆಡ್ ಕಿಂಗ್‍ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಪ್ರಭಲವಾದ ಡೆಮಾಕ್ರಸಿ ಯುಎಸ್‍ಎ/ಸಂಯುಕ್ತ ರಾಜ್ಯ ಅಮೇರಿಕ ದಂತಹ ಅತ್ಯಂತ ಮುಂದುವರಿದ ಮತ್ತು ಕಾಸ್ಮೋಪಾಲಿಟಿಯನ್ ದೇಶಗಳಲ್ಲಿ ಕೂಡ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಪ್ರತಿ ಸಮುದಾಯದ ಜನಗಣತಿ ಡೇಟಾವನ್ನು (ಅಂಕಿ-ಸಂಖ್ಯೆ) ಹೊಂದಿದೆ.
ಉದಾಹರಣೆಗೆ ಕರಿಯರು ಕ್ಯಾರಾಬಿಯನ್ ಬ್ಲ್ಯಾಕ್ಸ್, ಆಫ್ರಿಕನ್ ಬ್ಲ್ಯಾಕ್ಸ್ ಮತ್ತು ಅಮೇರಿಕನ್ ಬ್ಲ್ಯಾಕ್ಸ್ (ಆಫ್ರೋ-ಅಮೇರಿಕನ್) ಮೂರು ತೆರನಾದ ಪ್ರತ್ಯೇಕ-ಪ್ರತ್ಯೇಕ ಡೇಟಾವನ್ನು(ಅಂಕಿ-ಸಂಖ್ಯೆ)ಯನ್ನು ಸಂಗ್ರಹಿಸುತ್ತಾರೆ.
ಹೀಗಿರುವಾಗ, ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ವಿಶ್ವದ ಅತಿದೊಡ್ಡ ಜನಾಂಗೀಯ ವೈವಿಧ್ಯತೆಯ ರಾಷ್ಟ್ರವಾಗಿರುವುದರಿಂದ, ನಾವು ಸಂಖ್ಯಾತ್ಮಕ ಅತೀ ಸೂಕ್ಷ್ಮ ಕೊಡವ ಜನಾಂಗೀಯ ಬುಡಕಟ್ಟು ಕುಲದವರು ಕಲ್ಯಾಣ ರಾಜ್ಯ ಯೋಜನೆಗಳನ್ನು ಪಡೆಯುವ ಮೂಲಕ ನಮ್ಮನ್ನು ಸಶಕ್ತಗೊಳಿಸಲು ರಾಜ್ಯಡಳಿತಾಂಗದಲ್ಲಿ ಅಧಿಕೃತ ಡೇಟಾವನ್ನು (ಅಂಕಿ-ಸಂಖ್ಯೆ) ಹೊಂದಿರಬೇಕು. ನಮ್ಮ ಶಾಸ್ತ್ರೀಯ ‘ಕೊಡವ’ ನಾಮಕರಣವನ್ನು ಶಾಸನಬದ್ಧವಾಗಿ ಪುನಃಸ್ಥಾಪಿಸಬೇಕು.
ಈ ಅಧಿಕೃತ ನಾಮಕರಣದ ಮೂಲಕ ನಾವು ಖಂಡಿತವಾಗಿಯೂ ನಮ್ಮ ಎಲ್ಲಾ 9 ಪರಮಮೊಚ್ಛ ಆಕಾಂಕ್ಷೆಗಳು ಮತ್ತು ಗೌರವಾನ್ವಿತ ಗುರಿಗಳನ್ನು ಪಡೆದುಕೊಳ್ಳಬಹುದು ಮತ್ತು ಸಾಧಿಸಬಹುದು ಎಂದು ನಾಚಪ್ಪ ಪ್ರತಿಪಾದಿಸಿದರು.
Breaking News
- *ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಅರ್ಚಕರ ಮೇಲೆ ಹಲ್ಲೆ : ಕಾಂಗ್ರೆಸ್ ಕಾರ್ಯಕರ್ತ ಅಮಾನತು*
- *ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ*
- *ಸಿಎನ್‌ಸಿಯಿಂದ ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ದಿನ ಆಚರಣೆ*
- *ಪದ್ಮಶ್ರೀ ಪುರಸ್ಕೃತ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಅಭಿನಂದನೆ*
- *‘ಕೃತಕ ಅಂಗಾಂಗಗಳ ಜೋಡಣೆ ಮತ್ತು ಆರೋಗ್ಯ ತಪಾಸಣೆ’ ಶಿಬಿರ : ಬಡವರಿಗೆ ಅಗತ್ಯ ಆರೋಗ್ಯ ಸೌಲಭ್ಯ : ಸಚಿವ ಭೋಸರಾಜು*
- *ರಾಜ್ಯದಲ್ಲೇ ವಿನೂತನ ಪ್ರಯತ್ನ : ‘ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ’ ಉದ್ಘಾಟನೆ*
- *ಕೆ.ಎಸ್.ದರ್ಶನ್ ಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ*
- *ಕಾಲ್ಚೆಂಡು ಪಂದ್ಯಾವಳಿ : ತ್ರಿವೇಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಚಾಂಪಿಯನ್*
- *ವಿರಾಜಪೇಟೆ : ವಿವಿಧತೆಯಲ್ಲಿ ಏಕತೆಕಂಡಿರುವ ಸಂವಿಧಾನವನ್ನು ಗೌರವಿಸುವಂತಾಗಬೇಕು : ವಕೀಲ ಪುಷ್ಪರಾಜ್*
- *ಸೋಮವಾರಪೇಟೆ : ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*