ಮಡಿಕೇರಿ ಸೆ.23 : ಮಣಿಪಾಲ್ ಆಸ್ಪತ್ರೆ ಮೈಸೂರು ಮತ್ತು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಡಿಕೇರಿ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಎಂ.ಯಾಕುಬ್ ಅವರ ನೇತೃತ್ವದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ನಗರಾಧ್ಯಕ್ಷ ಬಿ.ವೈ.ರಾಜೇಶ್ ವಹಿಸಿದ್ದರು.
ಮಣಿಪಾಲ್ ಆಸ್ಪತ್ರೆಯ ಡಾ.ಪ್ರದೀಪ್ ರಾಜಣ್ಣ ಮತ್ತು ಸಂಗಡಿಗರು ಹಿರಿಯ ಆರೋಗ್ಯ ತಪಾಸಣೆ ನಡೆಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕಾಂಗ್ರೆಸ್ ನಗರ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಮಾಜಿ ಮೂಡಾಧ್ಯಕ್ಷ ಚುಮ್ಮಿದೇವಯ್ಯ, ಅಲ್ಪಸಂಖ್ಯಾತರ ಬ್ಲಾಕ್ ಅಧ್ಯಕ್ಷ ಕಲೀಲ್ ಭಾಷ, ಕಾರ್ಯದರ್ಶಿ ರೌಹುಫ್, ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ, ಪ್ರಮುಖರಾದ ಅಂಬೇಕಲ್ ನವೀನ್, ವಿ.ಪಿ.ಸುರೇಶ್, ಬಿ.ಸಿ.ಜಗದೀಶ್, ಕವನ್ ಕೊತ್ತೋಳಿ, ಆರ್.ಪಿ.ಚಂದ್ರಶೇಖರ್, ಜಾನ್ಸನ್ ಪಿಂಟೋ, ಕೆ.ಎ.ಮೊಣ್ಣಪ್ಪ, ಸ್ವರ್ಣಲತಾ, ದಿವ್ಯ, ಪ್ರೇಮ ಕೃಷ್ಣಪ್ಪ, ರಿಯಾಜ್, ಕವನ್ ಇಬ್ರಾಹಿಂ, ಇಮ್ರಾನ್ ಸೇರಿದಂತೆ ಕಾಂಗ್ರೆಸ್ ಹಿರಿಯರು ಮತ್ತು ಮಡಿಕೇರಿ ನಗರದ ಹಿರಿಯ ನಾಗರಿಕರು ನಾಗರಿಕರು ಶಿಬಿರದಲ್ಲಿ ಹಾಜರಿದ್ದರು.








