ಮಡಿಕೇರಿ ಸೆ.24 : 2023-24ನೇ ಸಾಲಿನ ಪದವಿ ಪೂರ್ವ ಕಾಲೇಜು, ಬಾಲಕರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಾಲಿಬೆಟ್ಟದ ವಿದ್ಯಾರ್ಥಿಗಳು ಪ್ರಥಮ ಸುತ್ತಿನಲ್ಲಿ ಸಿದ್ದಾಪುರದ ಇಕ್ರಾ ಕಾಲೇಜು, ದ್ವಿತೀಯ ಸುತ್ತಿನಲ್ಲಿ ಸಾಯಿ ಶಂಕರ್ ಕಾಲೇಜನ್ನು, ತೃತೀಯ ಸುತ್ತಿನಲ್ಲಿ ಕಾವೇರಿ ಕಾಲೇಜು ವಿರಾಜಪೇಟೆಯನ್ನು ಹಾಗೂ ಅಂತಿಮ ಸುತ್ತಿನಲ್ಲಿ ಬಲಿಷ್ಠ ತಂಡವಾದ ಕಾವೇರಿ ಕಾಲೇಜು ಗೋಣಿಕೊಪ್ಪಲನ್ನು ಮಣಿಸಿದರು. ತಾಲೂಕು ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಕೆ.ಕೆ.ಶೈನಾ ಅವರು ತಿಳಿಸಿದ್ದಾರೆ. ಮಾದಾಪುರ ಚೆನ್ನಮ್ಮ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯಲಿದೆ.










