ಮಡಿಕೇರಿ ಸೆ.28 : ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಮೂರು ಆಟೋಗಳು ಹಾನಿಗೊಳಗಾಗಿರುವ ಘಟನೆ ಗುರುವಾರ ಬೆಳಗ್ಗೆ ಹುಣುಸೂರು ಪಟ್ಟಣದ ಶಬೀರ್ ನಗರದಲ್ಲಿ ನಡೆದಿದೆ.
ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಮರದ ಬೇರು ಸಡಿಲಗೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಎಂದಿನಂತೆ ಆಟೋ ಚಾಲಕರು ಆಟೋ ನಿಲ್ದಾಣದಲ್ಲಿ ಆಟೋ ನಿಲ್ಲಿಸಿದ್ದರು. ಈ ಸಂದರ್ಭ ಬೇರು ಸಹಿತ ಮರ ಉರುಳಿ ಬಿದ್ದಿದೆ, ಆದರೆ ಅದೃಷ್ಟವಶಾತ್ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮರ ತೆರವಿಗೆ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.










