ಮಡಿಕೇರಿ ಅ.3 : ಗಾಂಧಿ ಜಯಂತಿಯ ಅಂಗವಾಗಿ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಆವರಣದಲ್ಲಿ ನಿರ್ಮಾಣಗೊಂಡ 9 ಅಡಿಯ ಗಾಂಧಿ ಪ್ರತಿಮೆನ್ನು ಶಾಸಕ ಡಾ.ಮಂತರ್ ಗೌಡ ಅವರು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ ಮತ್ತು ಉತ್ತಮ ಚಾರಿತ್ರ್ಯವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.
ನವೋದಯ ವಿದ್ಯಾಲಯ ಸಮಿತಿಯ ನಿವೃತ್ತ ಉಪ ನಿರ್ದೇಶಕ ರಾಘವನ್ ಮಾತನಾಡಿದರು. ಆರ್ಟ್ ಇನ್ ಎಜುಕೇಶನ್ ಯೋಜನೆಯಡಿಯಲ್ಲಿ ಪ್ರತಿಮೆ ನಿರ್ಮಾಣ ಮಾಡಿದ ಮಡಿಕೇರಿ ಕಲಾವಿದ ಆರ್.ಸಂದೀಪ್ ಕುಮಾರ್ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹಾಗೂ ವಿದ್ಯಾಲಯದ ಪೋಷಕ ಶಿಕ್ಷಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.
ಗಾಂಧೀಜಿಯ ಮೆಚ್ಚಿನ ಭಜನ್ ವೈಷ್ಣವ ಜನತೋ ಹಾಡಿನೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ಕೊಡವ ನೃತ್ಯ ನಡೆಯಿತು. ಪ್ರಾಂಶುಪಾಲರಾದ ಪಂಕಜಾಕ್ಷನ್ ಅವರು ಸ್ವಾಗತಿಸಿದರು. ಉಪ ಪ್ರಾಚಾರ್ಯರಾದ ಸುಧಾಮಣಿ ಅವರು ವಂದಿಸಿದರು. ಕನ್ನಡ ಶಿಕ್ಷಕರಾದ ಮಾರುತಿ ದಾಸಣ್ಣವರ್ ಕಾರ್ಯಕ್ರಮ ನಿರ್ವಹಿಸಿದರು.
::: ಸ್ವಚ್ಛತಾ ಕಾರ್ಯ ::: ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದಲ್ಲಿ ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಶಾಲಾ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಕೆ.ನಿಡುಗಣೆ ಗ್ರಾ.ಪಂ ಅಧ್ಯಕ್ಷರಾದ ಕೆ.ಡಿ.ಪಾರ್ವತಿ ಅವರು ಸ್ವಚ್ಛತೆಯ ಮಹತ್ವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಾಂಶುಪಾಲರಾದ ಪಂಕಜಾಕ್ಷನ್ ಅವರು ಇದ್ದರು.











