ಕಡಂಗ ಅ.3 : ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ಅರಪಟ್ಟು ಕಡಂಗ ಪಟ್ಟಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ಮಹಾತ್ಮ ಗಾಂಧೀಜಿಯವರ ಜನ್ಮ ದಿನದ ಅಂಗವಾಗಿ ಪಟ್ಟಣದ ಮುಖ್ಯರಸ್ತೆಗಳ ಬದಿ ಕಸ ಕಟ್ಟಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸ್ವಚ್ಛತೆ ಕಾಪಾಡಲು ನಮ್ಮೆಲ್ಲರ ಕರ್ತವ್ಯ ಹಾಗೂ ಸ್ವಚ್ಛತೆಯಿಂದ ಆಗುವ ಪ್ರಾಮುಖ್ಯತೆಯನ್ನು ತಿಳಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯರಾದ ಸಿ.ಇ.ಸುಬ್ಬೀರ್ , ಪಾಂಡ0ಡ ರಾಣಿ ಗಣಪತಿ , ವಾಣಿ ತಮ್ಮಯ್ಯ ,ಗ್ರಾಮ ಪಂಚಾಯಿತಿ ಅಧಿಕಾರಿ ಆಶಾ ಕುಮಾರಿ, ದಿನೇಶ್, ಗಣಪತಿ ದೇವಸ್ಥಾನ ಅಧ್ಯಕ್ಷ ಕುಲ್ಲಚಂಡ ಸಾಬಾ ಕರುಂಬಯ್ಯ, ಸ್ಥಳೀಯರಾದ ಝಕರಿಯ , ಆಟೋ ಚಾಲಕರಾದ, ಸಿದ್ದಿಕ್, ತಿಮ್ಮಯ್ಯ, ಹಂಸ, ಲೋಕೇಶ್, ಮಮ್ಮುಟ್ಟಿ ಸುನಿಲ್ ಹಾಜರಿದ್ದರು.
ವರದಿ : ನೌಫಲ್ ಕಡಂಗ








