ವಿರಾಜಪೇಟೆ ಅ.4 : ನಗರದ ಕಾಫಿ ತೋಟದ ಒಂದರಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞರಾದ ಸತೀಶ್ ಮತ್ತು ಅಮಾನ್ ರಕ್ಷಿಸಿದ್ದಾರೆ.
ವಿರಾಜಪೇಟೆ ನಗರದ ಪಂಜರ್ ಪೇಟೆಯ ನಿವಾಸಿ ದಿವಂಗತ ಜನರಲ್ ಕೊದಂಡ ಸೋಮಣ್ಣ ಅವರ ಮನೆಯ ತೋಟದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಉರಗ ತಜ್ಞರಾದ ಸತೀಶ್ ಹಾಗೂ ಅಮಾನ್ ಸತತ ಎರಡು ಗಂಟೆಯ ಪ್ರಯತ್ನದಿಂದ ಸುಮಾರು 11 ಅಡಿ ಉದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ವನ್ನು ರಕ್ಷಿಸಿದ್ದಾರೆ. ನಂತರ ಕಾಳಿಂಗ ಸರ್ಪವನ್ನು ಮಾಕುಟ್ಟ ವಲಯ ಅರಣ್ಯಕ್ಕೆ ಬಿಟ್ಟರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ








