ಮಡಿಕೇರಿ ಅ.11 : ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆ, ನೆಹರು ಯುವ ಕೇಂದ್ರ ಮುಂಭಾಗ, ಕಾವೇರಿ ಲೇ-ಔಟ್, ಮಡಿಕೇರಿ ಈ ಸಂಸ್ಥೆಯು 0 ಯಿಂದ 6 ವರ್ಷದವರೆಗಿನ ಒಪ್ಪಿಸಲ್ಪಟ್ಟ ಹಾಗೂ ಪೋಷಣೆ ಮತ್ತು ರಕ್ಷಣೆಗೆ ಒಳಪಟ್ಟ ಮಕ್ಕಳು ಇರುವ ಸಂಸ್ಥೆ ಆಗಿರುತ್ತದೆ. ಈ ಸಂಸ್ಥೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು 3 ಜನ ಆಯಗಳು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.ಸಂ. 08272-200450 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿಯ ಮಡಿಲು ಸರ್ಕಾರಿ ದತ್ತು ಸಂಸ್ಥೆಯ ಅಧೀಕ್ಷಕರು ತಿಳಿಸಿದ್ದಾರೆ.











