ಚೆಟ್ಟಳ್ಳಿ ಅ.11 : ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಕೈಲ್‍ಪೊಳ್ದ್ ಸಂತೋಷಕೂಟ ಹಾಗೂ ಕೊಡವ ಸಮಾಜದ ವಾರ್ಷಿಕಮಹಾ ಸಭೆ ನಡೆಯಿತು.
ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆದ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಮಾತನಾಡಿ, ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟದ ಮುತುವರ್ಜಿಯ ಫಲವಾಗಿ ಚೆಟ್ಟಳ್ಳಿ ಕೊಡವ ಸಮಾಜ ಸ್ಥಾಪನೆಯಾಯಿತು. ಕೊಡವ ಜನಾಂಗದ ಆಚಾರ ವಿಚಾರ ಒಗ್ಗಟು ಒತ್ರ್ತೊಮೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ಸಮಾಜ ಶ್ರಮಿಸಲಿದೆ ಎಂದರು.
ಎಲ್ಲರ ಸಹಕಾರ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೃತಪಟ್ಟ ಸಂಘದ ಸದಸ್ಯ ಬಲ್ಲಾರಂಡ ಕಾಳಪ್ಪ ರವಿ ಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಕಳೆದ ವರ್ಷದ ಮಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ವಾಚಿಸಿದರು. ಲೆಕ್ಕಪತ್ರವನ್ನು ಖಜಾಂಜಿ ಪುತ್ತರಿರ ಗಂಗು ಅಚ್ಚಯ್ಯ ಮಂಡಿಸಿದರು.
ಸಭೆಯಲ್ಲಿ ಸಮಾಜದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಪಳಗಂಡ ಗೀತಾ ಸುಬ್ಬಯ್ಯ ಪ್ರಾರ್ಥಿಸಿ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ ಸ್ವಾಗತಿಸಿರು. ಉಪಾದ್ಯಕ್ಷೆ ಐಚೆಟ್ಟೀರ ಸುನಿತಾ ಮಾಚಯ್ಯ ವಂದಿಸಿದರು.
ಸಂತೋಷ ಕೂಟ :: ಸಭೆಯ ನಂತರ ಕೈಲ್‍ಪೊಳ್ದ್ ಸಂತೋಷ ಕೂಟದ ಅಂಗವಾಗಿ ಸಮಾಜ ಹಿರಿಯ ಸದಸ್ಯ, ವಾಯುಪಡೆಯ ನಿವೃತ್ತ ಅಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ ಕೋವಿ, ಕತ್ತಿಗೆ ಪೂಜೆಸಲ್ಲಿಸಿದರಲ್ಲದೆ ತೆಂಗಿನಕಾಯಿಗೆ ಗುಂಡುಹೊಡೆಯುವ ಮೂಲಕ ಸಾಂಪ್ರದಾಯಿಕ ಆಚರಣೆ ಗೆ ಚಾಲನೆ ನೀಡಿದರು.
ನಂತರದಲ್ಲಿ ವಿವಿಧ ಮನೋರಂಜನಾ ಸ್ಪರ್ಧೆ ಏರ್ಪಡಿಸಲಾಯಿತು. ಮಹಿಳೆಯರು ತಯಾರಿಸಿದ ಎಲೆ ಊಟದ ಭೋಜನ ವಿಶೇಷವಾಗಿತ್ತು.
ಸಮಾರೋಪ :: ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಕೊಂಗೇಟಿರ ಡ್ಲ್ಯೂ ಚಂಗಪ್ಪ, ಬಲ್ಲಾರಂಡ ಗೌತಮಿ, ಬಿದ್ದಂಡ ಮಾದಯ್ಯ, ಕೊಂಗೇಟಿರ ರಾಣಾ ಪೂವಯ್ಯ ಹಾಜರಿದ್ದರು.
ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆಸಲ್ಲಿಸುತ್ತಿರುವ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಸಮಾಜ ಬಾಂಧವರಿಗೆ ವಿವಿಧ ಮನೋರಂಜನಾ ಕ್ರೀಡಾಕೂಟ ನಡೆದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಐಚೆಟ್ಟೀರ ಸುನಿತ ಮಾಚಯ್ಯ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ, ಜಂಟಿ ಖಜಾಂಜಿ ಐಚೆಟ್ಟೀರ ಮಾಚಯ್ಯ, ನಿರ್ದೆಶಕರುಗಳಾದ ಬಟ್ಟೀರ ಕಾಳಪ್ಪ, ಬಿದ್ದಂಡ ಮಾದಯ್ಯ, ಪುತ್ತರಿರ ಕಾಶಿ ಸುಬ್ಬಯ್ಯ, ಕೆಚೆಟ್ಟೀರ ರತಿ ಕಾರ್ಯಪ್ಪ, ಕಾನೂನು ಸಲಹೆಗಾರ ವಕೀಲ ಕಡೇಮಾಡ ವಿನ್ಸಿ ಅಪ್ಪಯ್ಯ, ಅಡಿಕೇರ ಶಾಂತಿಜಯ, ಪಳಂಗಂಡ ಶ್ಯಾಂ ಕಾಳಪ್ಪ ಹಾಗೂ ಸಮಾಜದ ಸದಸ್ಯರುಗಳು ಪಾಲ್ಗೊಂಡಿದ್ದರು.










