ಮಡಿಕೇರಿ ಅ.11 : ಸಾಮಾಜಿಕ ಜಾಗೃತಿ ಮೂಡಿಸುವ “ನಂಬಿಕೆ” ಎಂಬ ಕಿರುಚಿತ್ರ ಚಿತ್ರೀಕರಣಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಚಾಲನೆ ನೀಡಿದರು.
ವಿಶ್ವ ಕುಂಬೂರ್ ಅವರ ನಿಶು ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಸವಿತಾ ರೈ ಕ್ಲಪ್ ಮಾಡುವ ಮೂಲಕ ಚಾಲನೆ ನೀಡಿದರು.
ವಿಶ್ವಕುಂಬೂರು ಅವರ ನಿಶು ಕ್ರಿಯೇಷನ್ನಡಿ ನಿರ್ಮಾಣಗೊಳ್ಳುತ್ತಿರುವ ಚಿತ್ರವನ್ನು ಗೌತಮ್ ಸೂರ್ಯ ನಿರ್ದೇಶಿಸುತ್ತಿದ್ದು, ನಾಗೇಶ್ ಶೆಟ್ಟಿ ಛಾಯಾಗ್ರಹಣ ಇದೆ. ವಿಶ್ವ ಕುಂಬೂರ್ ನಟ ಮತ್ತು ನಿರ್ಮಾಪಕರಾಗಿದ್ದು, ಹತ್ತು ಜನ ಪತ್ರಕರ್ತರೆ ನಟಿಸುತ್ತಿರುವುದು ವಿಶೇಷ. ಚಿತ್ರೀಕರಣವು ಕೊಡಗಿನಾದ್ಯಂತ ನಡೆಯಲಿದೆ.