ಮಡಿಕೇರಿ ಅ.11 : ಮಡಿಕೇರಿ ದಸರಾ ಅಂಗವಾಗಿ ಸಾಂಸ್ಕೃತಿಕ ಕಾಯ೯ಕ್ರಮಗಳು ಅ.16 ರಿಂದ 24 ರವರೆಗೆ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜರುಗಲಿದ್ದು, ಈ ವಷ೯ ವೈವಿಧ್ಯಮಯ ಕಾಯ೯ಕ್ರಮಗಳನ್ನು ಸ್ಥಳೀಯ ಮತ್ತು ಹೊರಜಿಲ್ಲೆಯ ಕಲಾವಿದರಿಂದ ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ಪ್ರತಿ ನಿತ್ಯ ಸಂಜೆ 6.30 ಗಂಟೆಯಿಂದ ಸಾಂಸ್ಕೃತಿಕ ವೈವಿಧ್ಯತೆಯ ಕಾಯ೯ಕ್ರಮಗಳು ಪ್ರದಶಿ೯ತಗೊಳ್ಳಲಿದೆ.
ಅ.16 ರಂದು ಸೋಮವಾರ ಅಂತರರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಕಲಾವಿದ ಡ್ರಮ್ ದೇವಾ ಅವರ ತಂಡದಿಂದ ವಾದ್ಯ ಮತ್ತು ಸಂಗೀತ ಕಾಯ೯ಕ್ರಮ ಇರುತ್ತದೆ. ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯಿಂದ ನೃತ್ಯ ವೈವಿಧ್ಯ, ಮಡಿಕೇರಿಯ ಕಲಾಕಾವ್ಯ ನೃತ್ಯ ಶಾಲೆಯಿಂದ ನೃತ್ಯ ವೈವಿಧ್ಯ , ಮದೆನಾಡಿನ ಶ್ರೀ ಆದಿಚುಂಚನಗಿರಿ ಪಬ್ಲಿಕ್ ಸ್ಕೂಲ್ ವಿದ್ಯಾಥಿ೯ಗಳಿಂದ ಶಿವಚರಿತಾಮೖತಂ ನೖತ್ಯ ರೂಪಕ ಸೇರಿದಂತೆ ವಿವಿಧ ಕಾಯ೯ಕ್ರಮಗಳು ಮೊದಲ ದಿನದ ಆಕಷ೯ಣೆಯಾಗಿದೆ.
ಅ.17 ರಂದು ಮಂಗಳವಾರ ಮಡಿಕೇರಿಯ ನಾಟ್ಯ ನಿಕೇತನ ನೃತ್ಯ ಶಾಲಾ ತಂಡದಿಂದ ನೃತ್ಯ ವೈವಿಧ್ಯ, ಕುಶಾಲನಗರದ ಕುಂದನ ನಾಟ್ಯಾಲಯ ತಂಡದಿಂದ, ಶ್ರೀ ಮಂಜುನಾಥ ಮಹಿಮೆ ನೃತ್ಯ ರೂಪಕ , ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯ ತಂಡದಿಂದ ಭಾರತೀಯ ಶಾಸ್ತ್ರೀಯ ನೃತ್ಯ, ಕುಶಾಲನಗರದ ಟೀಮ್ ಅ್ಯಟಿಟ್ಯೂಡ್ ತಂಡದಿಂದ ನೃತ್ಯ ವೈವಿಧ್ಯ ಹಾಗೂ ಮಡಿಕೇರಿಯ ಮುತ್ತಿನ ಹಾರ ತಂಡದಿಂದ ಸಂಗೀತ ರಸಮಂಜರಿ ಕಾಯ೯ಕ್ರಮ ಸೇರಿದಂತೆ ವೈವಿಧ್ಯಮಯ ಕಾಯ೯ಕ್ರಮಗಳು ಆಯೋಜಿತವಾಗಿದೆ.
ಅ.18 ರಂದು ಬುಧವಾರ ಚಿಕ್ಕಮಗಳೂರಿನ ಹೆಸರಾಂತ ಗಾಯಕ ಸಾಯಿ ಸತೀಶ್ ಅವರಿಂದ ಭಕ್ತಿಸುಧೆ, ಮೂನಾ೯ಡುವಿನ ಸ್ಟೇಪ್ ಅಪ್ ಶೇಡ್ಸ್ ತಂಡದಿಂದ ನೃತ್ಯ ವೈವಿಧ್ಯ , ಮೇಕೇರಿಯ ಶ್ರೀಗೌರಿಶಂಕರ ಕಲಾಟ್ರಸ್ಟ್ ,ನಿಂದ ಶ್ರೀರಾಮಚರಿತ ನೃತ್ಯರೂಪಕ, ಪುತ್ತೂರಿನ ಶ್ರೀದೇವಿ ನೃತ್ಯಾರಾಧನ ಕೇಂದ್ರದಿಂದ ನೃತ್ಯ ಪ್ರೇರಣ, ಹಾಗೂ ಮಡಿಕೇರಿಯ ಸ್ವರಶಾರದಾ ತಂಡದಿಂದ ಗಾನವೈಭವ ಕಾಯ೯ಕ್ರಮ ಆಯೋಜಿತವಾಗಿದೆ.
ಅ.19 ರಂದು ಗುರುವಾರ ಕುಶಾಲನಗದ ಶಾರದಾ ಕಲಾತಂಡದಿಂದ ಜಾನಪದ ವೈವಿಧ್ಯ, ಮಡಿಕೇರಿಯ ಡಾನ್ಸ್ ಲ್ಯಾಬ್ ತಂಡದಿಂದ ನೃತ್ಯವೈವಿಧ್ಯ, ವಿರಾಜಪೇಟೆಯ ಪ್ರೇಮಾಂಜಲಿ ನಾಟ್ಯ ಮಯೂರಿ ಸಂಸ್ಥೆಯಿಂದ ನೃತ್ಯ ವೈವಿಧ್ಯ, ಮಡಿಕೇರಿಯ ಪೊಮ್ಮಕ್ಕಡ ಕೂಟದಿಂದ ನೃತ್ಯ, ಕೆ.ಪಿ.ಎಸ್.ಬೀಟ್ಸ್, ಕೊಡಗು ಜಿಲ್ಲಾ ಪತ್ರಕತ೯ರ ಸಂಘ(ರಿ) ತಂಡದಿಂದ ಸಂಗೀತ ರಸಮಂಜರಿ ಆಯೋಜಿಸಲ್ಪಟ್ಟಿದೆ.
ಅ. 20 ರಂದು ಶುಕ್ರವಾರ ಮಕ್ಕಳ ದಸರಾ ಅಂಗವಾಗಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗಾಂಧಿ ಮೈದಾನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಕ್ಕಳಿಂದಲೇ ಸಂತೆ, ಅಂಗಡಿ, ಮಂಟಪ ಸ್ಪಧೆ೯ಗಳು ಜರುಗಲಿದ್ದು, ಇವುಗಳೊಂದಿಗೆ ಕ್ಲೇಮಾಡೆಲಿಂಗ್, ಛದ್ಮವೇಶ ಸ್ಪಧೆ೯ಗಳು ಆಯೋಜಿತವಾಗಿದೆ.
ಅಂದು ಸಂಜೆ 6.30 ಗಂಟೆಯಿಂದ ಮಕ್ಕಳ ತಂಡಗಳಿಂದ ಆಕಷ೯ಕ ನೃತ್ಯ ಸಂಗೀತ ಕಾಯ೯ಕ್ರಮಗಳು ನಡೆಯಲಿದ್ದು, ಸರಿಗಮ ಲಿಟಲ್ ಛಾಂಪ್ ವಿಜೇತೆ ಕುಶಾಲನಗರದ ಪ್ರಗತಿ ಬಡಿಗೇರ್ ಕಾಯ೯ಕ್ರಮ ಉದ್ಘಾಟಿಸಲಿದ್ದಾರೆ. ಮಡಿಕೇರಿಯ ಗುರುಕುಲ ಕಲಾ ಮಂಡಳಿ ತಂಡದಿಂದ ನೃತ್ಯ, ಮಡಿಕೇರಿಯ ಕಿಂಗ್ಸ್ ಆಫ್ ಕೂಗ್೯ ತಂಡದಿಂದ ನೃತ್ಯವೈವಿಧ್ಯ, ಬೆಂಗಳೂರಿನ ಪ್ರತಿಭೆಗಳಾದ ಭೂಮಿಕ, ದೀಪಿಕ ಅವರಿಂದ ಗಾನವೈಭವ, ಅಂತರರಾಷ್ಟ್ರೀಯ ಖ್ಯಾತಿಯ ಅಶೋಕ ಪೊಳಲಿ ಮತ್ತು ತಂಡದಿಂದ ವೈವಿಧ್ಯಮಯ ನೃತ್ಯ ಪ್ರದಶ೯ನ ಮಕ್ಕಳೊಂದಿಗೆ ಹಿರಿಯರ ಮನಸೂರೆಗೊಳ್ಳಲಿದೆ.
ಅ.21 ರಂದು ಶನಿವಾರ ಯುವದಸರಾ ಅಂಗವಾಗಿ ವಿವಿಧ ಆಕಷ೯ಕ ಕಾಯ೯ಕ್ರಮಗಳು ಜರುಗಲಿದೆ.
ಅ.22 ರಂದು ಭಾನುವಾರ 8 ನೇ ವಷ೯ದ ಮಹಿಳಾ ದಸರಾ ಆಯೋಜಿತವಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗಾಂಧಿ ಮೈದಾನದಲ್ಲಿ ಜಿಲ್ಲೆಯ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪಧೆ೯ಗಳನ್ನು ಮಡಿಕೇರಿ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಭಾನುವಾರ ಸಂಜೆ 6 ಗಂಟೆಗೆ ಶಾಸಕ ಡಾ.ಮಂಥರ್ ಗೌಡ ಅವರ ಸಹಕಾರದಲ್ಲಿ ದೇಶದ ಹೆಸರಾಂತ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದಿಂದ ಮಹಿಳಾ ದಸರಾದ ವಿಶೇಷ ಆಕಷ೯ಣೆಯಾಗಿ ಸಂಗೀತ ವೈಭವ ಕಾಯ೯ಕ್ರಮ ಆಯೋಜಿಸಲ್ಪಟ್ಟಿದೆ.
ಅ. 23. ರಂದು ಸೋಮವಾರ ಆಯುಧಪೂಜೆ ಕಾಯ೯ಕ್ರಮ ಇರುತ್ತದೆ. ಶ್ರೀ ಕಾಮಾಕ್ಷಿ ಮಹಿಳಾ ಸಂಘದಿಂದ ಕಥಕ್ಕಳಿ, ಯುವಜಾನಪದ ಬಳಗ ವತಿಯಿಂದ ಜಾನಪದ ನೖತ್ಯ, ಮಂಗಳೂರಿನ ತಾಂಡವಂ ಡಾನ್ಸ್ ಅಕಾಡೆಮಿಯಿಂದ ನೖತ್ಯರಂಗ್, ಚಕ್ಕೇರ ಪಂಚಮ್ ತ್ಯಾಗರಾಜ್ ಮತ್ತು ತಂಡದಿಂದ ಗಾನಸುಧೆ ಸೇರಿದಂತೆ ಅನೇಕ ಕಾಯ೯ಕ್ರಮಗಳನ್ನು ಆಯೋಜಿಸಲಾಗಿದೆ.
ಅ.24 ರಂದು ಮಂಗಳವಾರ ವಿಜಯದಶಮಿ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಮುದ್ರ ಸ್ಕೂಲ್ ಆಫ್ ಡಾನ್ಸ್, ತಂಡದಿಂದ ನೖತ್ಯವೈವಿಧ್ಯ , ಉಡುಪಿಯ ಭಾಗ೯ವಿ ಡಾನ್ಸ್ ಟೀಮ್ ನಿಂದ ಗ್ರಾವಿಟಿ ಡಾನ್ಸ್ ಸೇರಿದಂತೆ ಕಾಯ೯ಕ್ರಮ ವೈವಿಧ್ಯಗಳಿರುತ್ತದೆ. ರಾತ್ರಿ 10 ಗಂಟೆಯಿಂದ ಬೆಳಗ್ಗಿನ ಜಾವ 5 ಗಂಟೆಯವರೆಗೆ ರಾಜ್ಯದ ಹೆಸರಾಂತ ಗಾಯಕ, ಗಾಯಕಿಯರಿಂದ ಸಂಗೀತ ರಸಮಂಜರಿ ಕಾಯ೯ಕ್ರಮ ಆಯೋಜಿಸಲಾಗಿದೆ ಎಂದು ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ದಾಖಲೆಯ 162 ಅಜಿ೯ಗಳು :: ಈ ಬಾರಿ ದಾಖಲೆಯ 162 ಅಜಿ೯ಗಳು ಆನ್ ಲೈನ್ ಮೂಲಕ ಸಲ್ಲಿಸಲ್ಪಟ್ಟಿದ್ದವು. ಸಾಂಸ್ಕೃತಿಕ ಸಮಿತಿ ಸಂಚಾಲಕ ತೆನ್ನಿರ ಮೈನ ನೇತೃತ್ವದಲ್ಲಿ ಅಜಿ೯ಗಳ ಪರಿಶೀಲನೆಯನ್ನು ಸಾಂಸ್ಕೃತಿಕ ಸಮಿತಿ ಕೈಗೊಂಡು ಜಿಲ್ಲೆಯ ಮತ್ತು ಹೊರ ಊರುಗಳ 40 ತಂಡಗಳಿಗೆ ಸಾಂಸ್ಕೃತಿಕ ಕಾಯ೯ಕ್ರಮಗಳಲ್ಲಿ ಅವಕಾಶ ನೀಡಿದೆ.
ಎಸ್.ಐ. ಮುನೀರ್ ಅಹಮ್ಮದ್ ಗೌರವ ಸಲಹೆಗಾರರಾಗಿರುವ ಸಾಂಸ್ಕೃತಿಕ ಸಮಿತಿಯಲ್ಲಿ ಸದಸ್ಯರಾಗಿ ಕುಡೆಕಲ್ ಸಂತೋಷ್ , ಭಾರತಿ ರಮೇಶ್, ರೇವತಿ ರಮೇಶ್, ವೀಣಾಕ್ಷಿ, ಮೀನಾಜ್ ಪ್ರವೀಣ್, ರೂಪ ಸುಬ್ಬಯ್ಯ, ಸತ್ಯಮಂಜು, ವಿನು ಈರಪ್ಪ, ಲೀಲಾ ಶೇಷಮ್ಮ, ಡೀನಾ, ನಿರಂಜನ್ ಪಿ.ಜೆ. ಯಾಷಿನ್ ಯು.ಜಿ. ಕವನ್ ಕೆ. ಸದಸ್ಯರಾಗಿ ಕಾಯ೯ನಿವ೯ಹಿಸಿದ್ದಾರೆ. ಜಿಲ್ಲಾಡಳಿತದ ಸಲಹಾ ಸಮಿತಿ ಸದಸ್ಯರಾಗಿ ನಗರಸಭೆಯ ಪೌರಾಯುಕ್ತ ವಿಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇ೯ಶಕ ಚಿನ್ನಸ್ವಾಮಿ ಇದ್ದಾರೆ.