ಮಡಿಕೇರಿ ಅ.11 : ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕೆ ಕೆಎಸ್ ಆರ್ ಟಿಸಿ ಬಸ್ ನಿಂದ ಮತ್ತೆ ಹಾನಿಯಾಗಿದೆ. ಇತ್ತೀಚೆಗಷ್ಟೆ ಬಸ್ ಡಿಕ್ಕಿಯಾಗಿ ಹಾನಿಗೀಡಾಗಿದ್ದ ವೃತ್ತವನ್ನು ದುರಸ್ತಿ ಪಡಿಸಲಾಗಿತ್ತು. ಅಲ್ಲದೆ ವೃತ್ತಕ್ಕೆ ವಾಹನಗಳು ಡಿಕ್ಕಿ ಹೊಡೆಯಬಾರದು ಎಂದು ಕಬ್ಬಿಣದ ತಡೆ ಬೇಲಿಯನ್ನು ನಿರ್ಮಿಸಲಾಗಿತ್ತು. ಆದರೆ ಇಂದು ಮತ್ತೆ ಕೆಎಸ್ ಆರ್ ಟಿಸಿ ಬಸ್ ವೊಂದು ತಡೆ ಬೇಲಿಗೆ ಹಾನಿ ಉಂಟು ಮಾಡಿದೆ.










