ಮಡಿಕೇರಿ ಅ.11 : ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯನ್ನು ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ 3ನೇ ಹಂತದ ಪಾದಯಾತ್ರೆಯ ಮುಂದುವರಿದ ಭಾಗವನ್ನು ಪೊನ್ನಂಪೇಟೆ ತಾಲ್ಲೂಕಿನ ಬಾಡಗರಕೇರಿ-ತೆರಾಲ್-ಬಿರುನಾಣಿಯ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೊನಾಡ್ ನಾಲ್ಕು ನಾಡು ಮಂದ್‌ಗಳಲ್ಲಿ ಪಾದಯಾತ್ರೆ ನಡೆಸಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಸಾಗಿದ ಪ್ರಮುಖರು ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು.
ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೊಡವ ಜಾಗೃತಿ ಸಭೆ ನಡೆಸಿದ ನಾಚಪ್ಪ, ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಕೋರಿದರು.
ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡಗಿನ ಆದಿಮಸಂಜಾತ ಕೊಡವ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಈ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರುವುದರಿಂದ ಎಸ್.ಟಿ ಪಟ್ಟಿಗೆ ಸೇರಿಸುವುದು ವರ್ತಮಾನದ ಅನಿವಾರ್ಯ ಅವಶ್ಯಕತೆಯಾಗಿದೆ. ಆದ್ದರಿಂದ ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ÷್ಮ, ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು.
ಕೊಡವ “ಸಂಸ್ಕಾರ ಗನ್” ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ಸಂವಿಧಾನದ 25 ಮತ್ತು 26ನೇ ವಿಧಿಗಳಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು. ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‌ಗೆ ಸೇರಿಸಬೇಕು. ನಮ್ಮ ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು ಸೇರಿದಂತೆ ಒಟ್ಟು 9 ಬೇಡಿಕೆಗಳ ಕುರಿತು ನಾಚಪ್ಪ ಹಕ್ಕೊತ್ತಾಯ ಮಂಡಿಸಿದರು.
ನೆರೆದಿದ್ದವರು ಪ್ರತಿಜ್ಞಾ ವಿಧಿ ಸ್ವೀಕರಿಸಿ ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಪಾದಯಾತ್ರೆ ಮತ್ತು ಜಾಗೃತಿ ಸಭೆಯಲ್ಲಿ ಬೊಟ್ಟಂಗಡ ಗಿರೀಶ್, ಬೊಟ್ಟಂಗಡ ಸವಿತಾ ಗಿರೀಶ್, ಅಣ್ಣಲ್ಮಾಡ ರೇಖಾ ಗಿರೀಶ್, ಕುಪ್ಪನ್ಮಾಡ ಬೇಬಿ ದೇವಯ್ಯ, ಬುಟ್ಟಿಯಂಡ ಸುನೀತ ಗಣಪತಿ, ನೆಲ್ಲಿರ ಮಧು, ನೆಲ್ಲಿರ ಮನು, ಅಣ್ಣಿರ ಪ್ರಸಾದ್, ಅಣ್ಣಿರ ಮುತ್ತಪ್ಪ, ಅಣ್ಣಿರ ಪೆಮ್ಮಯ್ಯ, ಅಣ್ಣಿರ ಪೊನ್ನಪ್ಪ, ಬಲ್ಯಮೀದೇರಿರ ಸಂಪತ್, ಅಣ್ಣಿರ ಕಾಶಿ, ಕುಪ್ಪುಡಿರ ಮುತ್ತಪ್ಪ, ಕಾಯಪಂಡ ಅಯ್ಯಪ್ಪ, ಕಾಯಪಂಡ ಪೆಮ್ಮಯ್ಯ, ಕಾಯಪಂಡ ಸುನಿಲ್, ಬಲ್ಯಮೀದೇರಿರ ಸುರೇಶ್, ಚಂಗನಮಾಡ ಮೊಣ್ಣಪ್ಪ, ಕಿಕನ್ಮಾಡ ಕಾರ್ಯಪ್ಪ, ಅಣ್ಣಲ್ಮಾಡ ಗಿರೀಶ್, ಕಲ್ಕಂಡ ಪ್ರಕಾಶ್, ಬೊಟ್ಟಂಗಡ ರವೀಂದ್ರ, ಮೂಕಳ್ಮಾಡ ವೀಟ, ಕಾಳಿಮಾಡ ತಿಮ್ಮಯ್ಯ, ಕಾಳಿಮಾಡ ಮೇದಪ್ಪ, ಕರ್ತಮಾಡ ಮೋಹನ್, ಅಣ್ಣಳ್ಮಾಡ ರಂಜನ್, ಕಾಯಪಂಡ ಪೂವಣ್ಣ, ಕಾಯಪಂಡ ಕುಟ್ಟಪ್ಪ, ಬೊಳ್ಳೆರ ಪೂಣಚ್ಚ, ಕಾಯಪಂಡ ಪೂಣಚ್ಚ, ಕಾಯಪಂಡ ಕಾವೇರಪ್ಪ, ಕಾಯಪಂಡ ಅಚ್ಚಯ್ಯ, ಕಾಳಿಮಾಡ ಸೋಮಯ್ಯ, ಎಂ.ಟಿ.ಅಶೋಕ್, ಎಂ.ಎಂ.ಅಶೋಕ್, ಬೊಜ್ಜಂಗಡ ನಂದ, ಬೊಳ್ಳೇರ ಮುತ್ತಣ್ಣ, ಕರ್ತಮಾಡ ರಘುಮಣಿ, ಕರ್ತಮಾಡ ಮಿಲನ್, ಅಣ್ಣಳ್ಮಾಡ ನಾಣಯ್ಯ, ಕರ್ತಮಾಡ ರತನ್ ತಿಮ್ಮಯ್ಯ, ಕುಪ್ಪನ್ಮಾಡ ಜೀವನ್, ಕರ್ತಮಾಡ ರಾಯ್, ಬೊಳ್ಳೆರ ವಾಸು ಬೊಳ್ಳಿಯಪ್ಪ, ಬೊಟ್ಟಂಗಡ ರಾಜು, ಚೇರಂಡ ಪಾಪು ಕಾರ್ಯಪ್ಪ, ಕುಪ್ಪನ್ಮಾಡ ಥಾಕ್, ಬೊಟ್ಟಂಗಡ ಜಪ್ಪು, ಮಲ್ಲೆಂಗಡ ಸನ್ನಿ, ಕಾಳಿಮಾಡ ರಾಶೀಕ ಮತ್ತಿತರರು ಪಾಲ್ಗೊಂಡಿದ್ದರು.
Breaking News
- *ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಅರ್ಚಕರ ಮೇಲೆ ಹಲ್ಲೆ : ಕಾಂಗ್ರೆಸ್ ಕಾರ್ಯಕರ್ತ ಅಮಾನತು*
- *ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ*
- *ಸಿಎನ್ಸಿಯಿಂದ ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ದಿನ ಆಚರಣೆ*
- *ಪದ್ಮಶ್ರೀ ಪುರಸ್ಕೃತ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಅಭಿನಂದನೆ*
- *‘ಕೃತಕ ಅಂಗಾಂಗಗಳ ಜೋಡಣೆ ಮತ್ತು ಆರೋಗ್ಯ ತಪಾಸಣೆ’ ಶಿಬಿರ : ಬಡವರಿಗೆ ಅಗತ್ಯ ಆರೋಗ್ಯ ಸೌಲಭ್ಯ : ಸಚಿವ ಭೋಸರಾಜು*
- *ರಾಜ್ಯದಲ್ಲೇ ವಿನೂತನ ಪ್ರಯತ್ನ : ‘ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ’ ಉದ್ಘಾಟನೆ*
- *ಕೆ.ಎಸ್.ದರ್ಶನ್ ಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ*
- *ಕಾಲ್ಚೆಂಡು ಪಂದ್ಯಾವಳಿ : ತ್ರಿವೇಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಚಾಂಪಿಯನ್*
- *ವಿರಾಜಪೇಟೆ : ವಿವಿಧತೆಯಲ್ಲಿ ಏಕತೆಕಂಡಿರುವ ಸಂವಿಧಾನವನ್ನು ಗೌರವಿಸುವಂತಾಗಬೇಕು : ವಕೀಲ ಪುಷ್ಪರಾಜ್*
- *ಸೋಮವಾರಪೇಟೆ : ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*