ಮಡಿಕೇರಿ ಅ.12 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಅ.15 ರಿಂದ ಅ.24ರ ವರೆಗೆ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ.
ಶ್ರೀ ದಂಡಿನ ಮಾರಿಯಮ್ಮ ದೇವಾಲಯವು 93ನೇ ವರ್ಷದ ಅದ್ದೂರಿ ದಸರಾ ಉತ್ಸವವನ್ನು ಆಚರಿಸುತ್ತಿದ್ದು, ಹತ್ತು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದೆ.
ಅ.15 ರಂದು ಬೆಳ್ಳಿಯ ಅಲಂಕಾರ, ಅ.16 ರಂದು ಹೂವಿನ ಅಲಂಕಾರ, ಅ.17 ರಂದು ಮಹಾಲಕ್ಷ್ಮಿ ಅಲಂಕಾರ, ಅ.18 ರಂದು ಬಾಗಿನ ದೀಪ ಅಲಂಕಾರ, ಅ.19 ರಂದು ಕಟೀಲು ದುರ್ಗಾ ಅಲಂಕಾರ, ಅ.20 ರಂದು ಶಾರದದೇವಿ, ಅ.21 ರಂದು ತಾವರೆ ಅಲಂಕಾರ, ಅ.22 ರಂದು ಬಳೆ ಅಲಂಕಾರ, ಅ.23 ರಂದು ನಿಂಬೆ ಹಣ್ಣಿನ ಅಲಂಕಾರ, ಅ.24 ರಂದು ವಜ್ರದ ಅಲಂಕಾರ ನಡೆಯಲಿದೆ.
ಅಲಂಕಾರ ಸೇವೆ ದುರ್ಗಾದೀಪ ನಮಸ್ಕಾರ ಪೂಜೆ ಹಾಗೂ ರಂಗ ಪೂಜೆ ಮಾಡಲು ಇಚ್ಚಿಸುವ ಭಕ್ತಾಧಿಗಳು 9886976306, 8792432414 ಸಂಪರ್ಕಿಸಬಹುದಾಗಿದೆ ಎಂದು ದೇವಾಲಯದ ಅಲಂಕಾರ ಮಂಡಳಿ ತಿಳಿಸಿದೆ.