ಮಡಿಕೇರಿ ಅ.12 : ಉಡುಪಿಯ ಸಾಲಿಗ್ರಾಮ ಡಿವೈನ್ ಪಾರ್ಕ್ ಟ್ರಸ್ಟ್ ನ ಅಂಗ ಸಂಸ್ಥೆಯಾದ ಮೂರ್ನಾಡುವಿನ ವಿವೇಕ ಜಾಗ್ರತ ಬಳಗದ ವತಿಯಿಂದ ಅ.15 ರಂದು ಮರಗೋಡಿನಲ್ಲಿ ವಿಶಿಷ್ಟ “ಆತ್ಮೋನ್ನತಿ ಶಿಬಿರ” ನಡೆಯಲಿದೆ.
ಅಂದು ಬೆಳಗ್ಗೆ 9.30 ಗಂಟೆಯಿಂದ 1.30 ರವರೆಗೆ ಮರಗೋಡಿನ ಗೌಡ ಸಮಾಜದಲ್ಲಿ ಡಿವೈನ್ ಪಾರ್ಕ್ ನ ಅಧಿಕಾರಿಗಳಾದ ರಾಜೇಶ್ ನಾಯರ್ ಹಾಗೂ ಪ್ರೇಮ ಪ್ರಭಾಕರ್ ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆತ್ಮೋನ್ನತಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮೂರ್ನಾಡು ವಿವೇಕ ಜಾಗ್ರತ ಬಳಗದ ಅಧ್ಯಕ್ಷರಾದ ಬಿ.ಟಿ.ದಿವ್ಯ ತೇಜಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವರವಾಗಿ ಬಂದಿರುವ ಈ ಮಾನವ ಜನ್ಮದ ಒಳಗಿರುವ ಪ್ರಾಣಶಕ್ತಿಯಾದ ದೇವರ ಮಧುರ ವಾಣಿಯನ್ನು ಒಳಕಿವಿಯಿಂದ ಕೇಳಿ, ದಿವ್ಯದರುಶನ ಭಾಗ್ಯ ಪಡೆದು ದೇವರೇ ಆಗಿ ಇತರರನ್ನೂ ದೇವರಾಗಿಸುವುದು ಶಿಬಿರದ ಉದ್ದೇಶವಾಗಿದೆ. ಒಳಗಿರುವ ಆತ್ಮಶಕ್ತಿಯನ್ನು ಮೇಲೇರಿಸಿ ಪುನೀತರಾಗುವುದೇ ಆತ್ಮೋನ್ನತಿಯ ಸರಳ ವಿಧಾನವಾಗಿದೆ. ಪಶುತ್ವದಿಂದ ಮಾನವತ್ವವನ್ನು ಪಡೆದು, ದೈವತ್ವಕ್ಕೇರುವ ಅತ್ಯಪರೂಪದ ಈ ಸೌಭಾಗ್ಯವೇ ಆತ್ಮೋನ್ನತಿ ಶಿಬಿರವಾಗಿದೆ. ಬಂಧನ, ಮನನ, ಸ್ಮರಣ, ಗಮನಗಳೆಲ್ಲವೂ ಇಲ್ಲಿವೆ.
ಮಾನವನು ಎರಡು ಕಾಲಿನ ಹುಲಿ, ಸಿಂಹ, ಹಾವು, ಕರಡಿಯಂತೆ ವರ್ತಿಸಬಾರದು. ಜೀವನ ಮೌಲ್ಯಗಳ ಶಾಶ್ವತ ಅರಿವಿರಲೇಬೇಕು. “ಬದುಕು ಜಟಕಾ ಬಂಡಿ” ಎಂಬ ಮಾತಿದೆ. ಸಂಸಾರದ ನಾನಾ ಜಂಜಾಟ, ಗೊಂದಲಗಳಿಗೆ ಆತ್ಮೋನ್ನತಿ ಶಿಬಿರದಿಂದ ಸುಲಭ ಪರಿಹಾರ ದೊರೆಯಲಿದೆ ಎಂದು ಬಿ.ಟಿ.ದಿವ್ಯ ತೇಜಕುಮಾರ್ ತಿಳಿಸಿದ್ದಾರೆ.









