ಮಡಿಕೇರಿ ಅ.13 : ಒಡನಾಟ, ಸಾಮರಸ್ಯದೊಂದಿಗೆ ಜೀವನದಲ್ಲಿ ಸಾಮಾಜಿಕ ಸೇವೆಯ ಮೂಲಕ ಮನತೃಪ್ತಿಯೊಂದಿಗೆ ಸಂಭ್ರಮಿಸುವುದನ್ನೂ ರೋಟರಿ ಸಂಸ್ಥೆಗಳು ಕಲಿಸುತ್ತವೆ ಎಂದು ರೋಟರಿ ಜಿಲ್ಲೆ 3181 ನ ಗವನ೯ರ್ ಎಚ್.ಆರ್.ಕೇಶವ್ ಹೇಳಿದ್ದಾರೆ.
ಮಡಿಕೇರಿ ರೋಟರಿ ವುಡ್ಸ್ ಗೆ ಅಧಿಕೃತ ಭೇಟಿ ನೀಡಿದ ಸಂದಭ೯ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಮಾತನಾಡಿದ ರೋಟರಿ ಜಿಲ್ಲೆ 3181 ಗವನ೯ರ್ ಎಚ್.ಆರ್.ಕೇಶವ್, ಹೊಸ ರೋಟರಿ ಸಂಸ್ಧೆಗಳು ಸಾಕಷ್ಟು ಚೈತನ್ಯದಾಯಿತ್ವದೊಂದಿಗೆ ಬೇರೆ ಸಂಸ್ಥೆಗಳಿಗಿಂತ ಉತ್ತಮವಾಗಿ ಕಾಯ೯ನಿವ೯ಹಿಸಲು ಸಾಧ್ಯ. 2 ನೇ ವಷ೯ದಲ್ಲಿ ಸಾಗುತ್ತಿರುವ ರೋಟರಿ ವುಡ್ಸ್ ಇದನ್ನೇ ಸಾಬೀತುಪಡಿಸಿದೆ ಎಂದರು.
ರೋಟರಿ ವಲಯ ಸಹಾಯಕ ಗವನ೯ರ್ ದೇವಣಿರ ತಿಲಕ್, ಅಂಗನವಾಡಿಗಳ ಕಾಯಕಲ್ಪಕ್ಕೆ ರೋಟರಿ ಜಿಲ್ಲೆ 3181 ವಿಶೇಷ ಯೋಜನೆಗಳನ್ನು ರೂಪಿಸಿದೆ ಎಂದರು. ಅಧ್ಯಕ್ಷರು, ಕಾಯ೯ದಶಿ೯ ಜತೆ ಎಲ್ಲಾ ರೋಟರಿ ಸದಸ್ಯರು ಕೈಜೋಡಿಸಿದರೆ ಸಾಮಾಜಿಕ ಸೇವಾ ಕಾಯ೯ಗಳು ಸುಗಮವಾಗಿ ಸಾಗುತ್ತವೆ ಎಂದೂ ತಿಲಕ್ ಹೇಳಿದರು.
ರೋಟರಿ ವುಡ್ಸ್ ಗೆ ಇದೇ ಸಂದಭ೯ 7 ಹೊಸ ಸದಸ್ಯರನ್ನು ಸೇಪ೯ಡೆಗೊಳಿಸಲಾಯಿತು. ಈ ನಿಟ್ಟಿನಲ್ಲಿ ರಾಜ್ಯಪಾಲ ಕೇಶವ್ ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು,
ರೋಟರಿ ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್ ವೇದಿಕೆಯಲ್ಲಿದ್ದರು. ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್ ಸ್ವಾಗತಿಸಿ, ಕಾಯ೯ದಶಿ೯ ಹರೀಶ್ ಕಿಗ್ಗಾಲು ವಂದಿಸಿದರು. ರೋಟರಿಯ ನೂರಾರು ಸದಸ್ಯರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.









