ಮಡಿಕೇರಿ ಅ.15 – ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾಯ೯ಕ್ರಮಗಳು ಅ.16 ರಿಂದ ಪ್ರಾರಂಭವಾಗಲಿದೆ. ಆರಂಭಿಕ ದಿನವೇ ಸಂಗೀತ, ನೖತ್ಯ, ವಾದ್ಯಗಳ ಸಂಗಮದ ವೈವಿಧ್ಯತೆಗಳು ಮೂಡಿಬರಲಿದೆ.
ಸಂಜೆ 7 ಗಂಟೆಯಿಂದ ನಗರದ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ಪ್ರಥಮ ದಿನದ ಆಕಷ೯ಣೆಯಾಗಿ ಅಂತರರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಕಲಾವಿದ ಡ್ರಮ್ ದೇವಾ ಅವರ ತಂಡದಿಂದ ವಾದ್ಯ ಮತ್ತು ಸಂಗೀತ ಕಾಯ೯ಕ್ರಮ ಇರುತ್ತದೆ. ವಿವಿಧ ಭಾಷೆಗಳ 600 ಕ್ಕೂ ಅಧಿಕ ಸಿನಿಮಾಗಳಲ್ಲಿ ವಾದ್ಯಸಂಗೀತಕಾರನಾಗಿ ಕಾಯ೯ನಿವ೯ಹಿಸಿರುವ ಡ್ರಮ್ ದೇವ ವಿದೇಶಗಳಲ್ಲಿಯೂ ಕಾಯ೯ಕ್ರಮ ನೀಡಿದ್ದಾರೆ. ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ ಮೊದಲ ದಿನ ದೇವಾ ಅವರೊಂದಿಗೆ ಎದೆ ತುಂಬಿ ಹಾಡಿದೆನು ಖ್ಯಾತಿಯ ಗಾಯಕ ಪುರುಷೋತ್ತಮ, ಸರಿಗಮಪ ಖ್ಯಾತಿಯ ಹಂಸಿನಿ, ದಿವ್ಯಾಯಾದವ್, ಮನುಯಾದವ್ ಸೇರಿದಂತೆ ಅನೇಕ ಗಾಯಕರು, ಖ್ಯಾತ ವಾದ್ಯ ಸಂಗೀತಕಾರರಿಂದ ಕಾಯ೯ಕ್ರಮ ಆಯೋಜಿತವಾಗಿದೆ.
ವೀರಾಜಪೇಟೆಯ ನಾಟ್ಯಾಂಜಲಿ ನೖತ್ಯ ಸಂಸ್ಥೆಯಿಂದ ನೖತ್ಯ ವೈವಿಧ್ಯ, ಮಡಿಕೇರಿಯ ಕಲಾಕಾವ್ಯ ನಾಟ್ಯಶಾಲಾ ವಿದ್ಯಾಥಿ೯ಗಳಿಂದ ನೖತ್ಯವೈವಿಧ್ಯ , ಮದೆನಾಡಿನ ಶ್ರೀ ಆದಿಚುಂಚನಗಿರಿ ಪಬ್ಲಿಕ್ ಸ್ಕೂಲ್ ವಿದ್ಯಾಥಿ೯ಗಳಿಂದ ಶಿವಚರಿತಾಮೖತಂ ನೖತ್ಯ ರೂಪಕ ಸೇರಿದಂತೆ ವಿವಿಧ ಕಾಯ೯ಕ್ರಮಗಳು ಮೊದಲ ದಿನದ ಆಕಷ೯ಣೆಯಾಗಿದೆ. ಇದರೊಂದಿಗೆ ಅನೇಕ ವೈವಿಧ್ಯಮಯ ಕಾಯ೯ಕ್ರಮಗಳು ಮೊದಲ ದಿನ ಆಯೋಜಿತವಾಗಿದೆ ಎಂದು ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜ್ ಕಲಾಸಂಭ್ರಮ ವೇದಿಕೆಯಲ್ಲಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ, ನಗರ ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾಯ೯ಕ್ರಮದಲ್ಲಿ ಶಾಸಕ ಡಾ.ಮಂಥರ್ ಗೌಡ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ , ದಸರಾ ಸಮಿತಿ ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ, ವಿಧಾನಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ. ಸುನೀಲ್ ಸುಬ್ರಹ್ಮಣಿ , ನಗರಸಭೆಯ ಉಪಾಧ್ಯಕ್ಷೆ ಸವಿತಾರಾಕೇಶ್, ಜಿಲ್ಲಾ ಉಸ್ತುವಾರಿ ಕಾಯ೯ದಶಿ೯ಎಸ್.ವಿ.ಪ್ರಸಾದ್, ಜಿಲ್ಲಾಧಿಕಾರಿ ವೆಂಕಟರಾಜಾ, ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್, ಜಿ.ಪಂ. ಮುಖ್ಯಕಾಯ೯ನಿವ೯ಹಣಾಧಿಕಾರಿ ವಣಿ೯ತ್ ನೇಗಿ, ನಗರಸಭೆಯ ಪೌರಾಯುಕ್ತ ವಿಜಯ್, ಪ್ರಧಾನ ಕಾಯ೯ದಶಿ೯ ಬಿ.ವೈ.ರಾಜೇಶ್, ದಸರಾ ಸಮಿತಿ ಜಜಾಂಜಿ ಅರುಣ್ ಶೆಟ್ಟಿ, ಕನ್ನಡ ಮತ್ತು ಸಂಸ್ಕೖತಿ ಇಲಾಖೆಯ ಸಹಾಯಕ ನಿದೇ೯ಶಕ ಚಿನ್ನಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದೇ ಸಂದಭ೯ ಮಡಿಕೇರಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆ ಬಳಿ ಖ್ಯಾತ ಮರಳು ಕಲಾವಿದೆ ಎಂ.ಎನ್. ಗೌರಿ ರಚಿಸಿರುವ ವನದೈವ ಮರಳು ಕಲಾಕೖತಿ ಮತ್ತು ಮಡಿಕೇರಿ ದಸರಾ ಫೋಟೋ ಪಾಯಿಂಟ್ ನ್ನೂ ಗಣ್ಯರು ಉದ್ಘಾಟಿಸಲಿದ್ದಾರೆ.
Breaking News
- *ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಅರ್ಚಕರ ಮೇಲೆ ಹಲ್ಲೆ : ಕಾಂಗ್ರೆಸ್ ಕಾರ್ಯಕರ್ತ ಅಮಾನತು*
- *ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ*
- *ಸಿಎನ್ಸಿಯಿಂದ ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ದಿನ ಆಚರಣೆ*
- *ಪದ್ಮಶ್ರೀ ಪುರಸ್ಕೃತ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಅಭಿನಂದನೆ*
- *‘ಕೃತಕ ಅಂಗಾಂಗಗಳ ಜೋಡಣೆ ಮತ್ತು ಆರೋಗ್ಯ ತಪಾಸಣೆ’ ಶಿಬಿರ : ಬಡವರಿಗೆ ಅಗತ್ಯ ಆರೋಗ್ಯ ಸೌಲಭ್ಯ : ಸಚಿವ ಭೋಸರಾಜು*
- *ರಾಜ್ಯದಲ್ಲೇ ವಿನೂತನ ಪ್ರಯತ್ನ : ‘ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ’ ಉದ್ಘಾಟನೆ*
- *ಕೆ.ಎಸ್.ದರ್ಶನ್ ಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ*
- *ಕಾಲ್ಚೆಂಡು ಪಂದ್ಯಾವಳಿ : ತ್ರಿವೇಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಚಾಂಪಿಯನ್*
- *ವಿರಾಜಪೇಟೆ : ವಿವಿಧತೆಯಲ್ಲಿ ಏಕತೆಕಂಡಿರುವ ಸಂವಿಧಾನವನ್ನು ಗೌರವಿಸುವಂತಾಗಬೇಕು : ವಕೀಲ ಪುಷ್ಪರಾಜ್*
- *ಸೋಮವಾರಪೇಟೆ : ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*