ಮಡಿಕೇರಿ ಅ.17 : ಮಡಿಕೇರಿ ದಸರಾ ಸಾಂಸ್ಕೃತಿಕ ಕಾಯ೯ಕ್ರಮಗಳ ಮೂರನೇ ದಿನವಾದ ಅ.18 ರಂದು (ಬುಧವಾರ) ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿದೆ.
ಚಿಕ್ಕಮಗಳೂರಿನ ಹೆಸರಾಂತ ಗಾಯಕ ಸಾಯಿ ಸತೀಶ್ ಅವರಿಂದ ಭಕ್ತಿಸುಧೆ, ಮೂನಾ೯ಡುವಿನ ಸ್ಟೇಪ್ ಅಪ್ ಶೇಡ್ಸ್ ತಂಡದಿಂದ ನೖತ್ಯ ವೈವಿಧ್ಯ , ಮೇಕೇರಿಯ ಶ್ರೀ ಗೌರಿಶಂಕರ ಕಲಾಟ್ರಸ್ಟ್ ನಿಂದ ಶ್ರೀ ರಾಮಚರಿತ ನೃತ್ಯ ರೂಪಕ, ಪುತ್ತೂರಿನ ಶ್ರೀದೇವಿ ನೃತ್ಯಾರಾಧನ ಕೇಂದ್ರದಿಂದ ನೃತ್ಯ ಪ್ರೇರಣ ಹಾಗೂ ಮಡಿಕೇರಿಯ ಸ್ವರಶಾರದಾ ತಂಡದಿಂದ ಗಾನ ವೈಭವ ಕಾಯ೯ಕ್ರಮ ಆಯೋಜಿತವಾಗಿದೆ.








