ಮಡಿಕೇರಿ ಅ.19 : ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ ಐದನೇ ದಿನವಾದ ಶುಕ್ರವಾರ ಮಕ್ಕಳ ದಸರಾ ಸಂಭ್ರಮ ಕಂಡುಬರಲಿದೆ. ಮಕ್ಕಳಿಂದಲೇ ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ.
ಅ. 20 ರಂದು ಶುಕ್ರವಾರ ಮಕ್ಕಳ ದಸರಾ ಅಂಗವಾಗಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗಾಂಧಿ ಮೈದಾನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಕ್ಕಳಿಂದಲೇ ಸಂತೆ, ಅಂಗಡಿ, ಮಂಟಪ ಸ್ಪಧೆ೯ಗಳು ಜರುಗಲಿದ್ದು, ಇವುಗಳೊಂದಿಗೆ ಕ್ಲೇಮಾಡೆಲಿಂಗ್, ಛದ್ಮವೇಶ ಸ್ಪಧೆ೯ಗಳು ಆಯೋಜಿತವಾಗಿದೆ. ಮಕ್ಕಳ ದಸರಾವನ್ನು ಶಾಸಕ ಡಾ.ಮಂಥರ್ ಗೌಡ ಉದ್ಘಾಟಸಲಿದ್ದು, ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ, ರೋಟರಿ ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್ ಎಸ್ ಸಂಪತ್ ಕುಮಾರ್, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ, ಉಪಾಧ್ಯಕ್ಷೆ ಸವಿತಾರಾಕೇಶ್, ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ಪ್ರಧಾನ ಕಾಯ೯ದಶಿ೯ ರಾಜೇಶ್ ಬಿ.ವೈ., ಖಜಾಂಜಿ ಅರುಣ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಮಕ್ಕಳ ದಸರಾ ಸಮಿತಿ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಸಂಜೆ 6.30 ಗಂಟೆಯಿಂದ ಮಕ್ಕಳ ತಂಡಗಳಿಂದ ಆಕಷ೯ಕ ನೖತ್ಯಸಂಗೀತ ಕಾಯ೯ಕ್ರಮಗಳು ನಡೆಯಲಿದ್ದು ಸರಿಗಮಪ ವಿಜೇತೆ ಕುಶಾಲನಗರದ ಪ್ರಗತಿ ಬಡಿಗೇರ್ ಮತ್ತು ಡಾನ್ಸ್ ಕನಾ೯ಟಕ ಡಾನ್ಸ್ ರಿಯಾಲಿಟಿ ಶೋ ಫೈನಲಿಸ್ಟ್ ಮಡಿಕೇರಿಯ ಲಿಪಿಕಾ ಕಾಯ೯ಕ್ರಮ ಉದ್ಘಾಟಿಸಲಿದ್ದಾರೆ. ಮಡಿಕೇರಿಯ ಗುರುಕುಲ ಕಲಾ ಮಂಡಳಿ ತಂಡದಿಂದ ನೖತ್ಯ, ಮಡಿಕೇರಿಯ ಕಿಂಗ್ಸ್ ಆಫ್ ಕೂಗ್೯ ತಂಡದಿಂದ ನೖತ್ಯವೈವಿಧ್ಯ, ಬೆಂಗಳೂರಿನ ಪ್ರತಿಭೆಗಳಾದ ಭೂಮಿಕ, ದೀಪಿಕ ಅವರಿಂದ ಗಾನವೈಭವ, ಅಂತರರಾಷ್ಟ್ರೀಯ ಖ್ಯಾತಿಯ ಅಶೋಕ ಪೊಳಲಿ ಮತ್ತು ತಂಡದಿಂದ ವೈವಿಧ್ಯಮಯ ನೖತ್ಯ ಪ್ರದಶ೯ನ ಮಕ್ಕಳೊಂದಿಗೆ ಹಿರಿಯರ ಮನಸೂರೆಗೊಳ್ಳಲಿದೆ. ಇದರೊಂದಿಗೆ ಜಿಲ್ಲೆಯ ಮಕ್ಕಳ ಅನೇಕ ತಂಡಗಳಿಂದ ವೈವಿಧ್ಯಮಯ ಕಾಯ೯ಕ್ರಮಗಳು ಮೂಡಿಬರಲಿದೆ.