ಮಡಿಕೇರಿ ಅ.19 : ಜಲಜೀವನ್ ಮಿಷನ್ ಇಂಪ್ಲಿಮೆಂಟೇಶನ್ ಅಯಿಂಡ್ ಸ್ಫೋರ್ಟ್ಸ್ಂಗ್ ಏಜೆನ್ಸಿ ತಂಡದ ವತಿಯಿಂದ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನ ನೀರುಗಂಟಿಗಳಿಗೆ, ವಾಟರ್‌ಮ್ಯಾನ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಜಲಜೀವನ್ ಮಿಷನ್ ಇಂಪ್ಲಿಮೆಂಟೇಶನ್ ಅಯಿಂಡ್ ಸ್ಫೋರ್ಟ್ಸ್ಂಗ್ ಏಜೆನ್ಸಿ ತಂಡದ ವತಿಯಿಂದ ಫೀಲ್ಡ್ ಟೆಸ್ಟ್ ಕಿಟ್ ನಿಂದ ಕುಡಿಯುವ ನೀರಿನ ಗುಣಮಟ್ಟ, ಪರೀಕ್ಷೆಯ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.
ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲರಿಗೆ ಜೆ ಜೆ ಎಂ ಯೋಜನೆಯ ಅನುಷ್ಠಾನದ ಕುರಿತು, ಯೋಜನೆಯ ಅನುಷ್ಠಾನದಲ್ಲಿ ಸ್ಥಳೀಯರ ಸಹಭಾಗೀತ್ವದ ಕುರಿತು, ಜಲ ಮೂಲಗಳ ಸಂರಕ್ಷಣೆಯ ಕುರಿತು, ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೊಳ್ಳುವುದರಿಂದ ಆಗುವ ಪ್ರಯೋಜನದ ಕುರಿತು ಮತ್ತು ಘನ ಮತ್ತು ದ್ರವ ತ್ಯಾಜ್ಯ ಸಮರ್ಪಕ ನಿರ್ವಹಣೆ ಕುರಿತು ಜಲಜೀವನ್ ಮಿಷನ್ ಐನ್ಪಲಿಟೇಸನ್ ಅಯಿಂಡ್ ಸ್ಫೋರ್ಟ್ಸ್ಂಗ್ ಏಜೆನ್ಸಿ ತಂಡದ ಸದಸ್ಯರು ಮಾಹಿತಿ ನೀಡಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಬಗ್ಗೆ ಹಾಗೂ ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ಕುರಿತು ತರಬೇತಿ ನೀಡಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಲಜೀವನ್ ಮಿಷನ್ ಪರಿವೀಕ್ಷ ಗಯಾ, ವ್ಯವಸ್ಥಾಪಕ ಸ್ವರೂಪ ಹಾಜರಿದ್ದರು.