ಕಕ್ಕಬ್ಬೆ ಅ.26 : ಕುಂಜಿಲ ಸಮೀಪದ ಇತಿಹಾಸ ಪ್ರಸಿದ್ಧ ಪಯ್-ನರಿ ದರ್ಗಾ ವಠಾರದಲ್ಲಿ ಬೃಹತ್ ಮೀಲಾದ್ ಸಮ್ಮೇಳನ ಹಾಗೂ ಶಅರೇ ಮುಬಾರಕ್ ಪ್ರದರ್ಶನ ನಡೆಯಿತು.
ಅಲ್ ಅಮೀನ್ ಹಾಗೂ ಅಲ್ ಹಬೀಬ್ ಎಂಬ ಎರಡು ತಂಡಗಳಾಗಿ ಸುಮಾರು ನಲವತ್ತಕ್ಕಿಂತಲು ಹೆಚ್ಚಿನ ಸ್ಪರ್ಧೆ ನಡೆಯಿತು.
ಖ್ಯಾತ ಸೂಫಿ ವರ್ಯರು ಸಾತ್ವಿಕ ಪಂಡಿತರಾದ ಶೃಖ್ ಶಂಸುದ್ದೀನ್ ಅಲ್ ಖಾದಿರಿ ಮೌಲೂದ್ ಪಾರಾಯಣ ನಡೆಸಿದರು.
ಅಬೂ ಸಈದ್ ಹುಸೈನ್ ಉಸ್ತಾದ್, ಹುಸೈನ್ ಸಖಾಫಿ ಎಮ್ಮೆಮಾಡು, ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ, ಮುಹಮ್ಮದ್ ಸಖಾಫಿ ಆಝಾದ್ ನಗರ, ನಾಪೋಕ್ಲು ಖತೀಬ್ ಅಹ್ಸನಿ,ಕೊಳಕೇರಿ ಖತ್ವೀಬ್,ಹಫೀಳ್ ಸಅದಿ ಮುಂತಾದ ಉಲಮಾಗಳ ಸಾನ್ನಿಧ್ಯ ವಹಿಸಿದರು.
ಅಬ್ದುಲ್ ಅಜೀಜ್ ಅಲ್ ಐದರೂಸಿ ಪ್ರೌಢ ಗಾಂಭೀರ್ಯದ ದುಆ ನೆರವೇರಿಸಿದರು.
ಮುಸ್ಥಫಾ ಸಖಾಫಿ ತೆನ್ನಲ ನಫೀಸತ್ ಮಾಲೆ ಹಾಡಿದರು. ಶಿವಮೊಗ್ಗ ತಂಗಳ್ ಪ್ರಾರ್ಥನೆ ನೆರವೇರಿಸಿದರು. ನಿಝಾರ್ ಅಹ್ಸನಿ ಉಸ್ತಾದ್ ನಿರೂಪಿಸಿದರು.
ವರದಿ : ಸಜಿದ್ ಪಯ್ಯಡಿ








