ಮಡಿಕೇರಿ ಅ.26 : ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮದಲ್ಲಿ ನಡೆದಿದೆ.
ಬಿರುನಾಣಿ ಗ್ರಾಮದ ಕಳಕೂರ್ ನಿವಾಸಿ ಕಳಕಂಡ ಬೋಪಯ್ಯ (ಶಶಿ-52 ವರ್ಷ) ಅವರು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬೋಪಯ್ಯ ಅವರು ಇದೇ ಅ.24 ರಂದು ಮನೆ ಬಿಟ್ಟು ತೆರಳಿದ್ದು, ಇವರಿಗಾಗಿ ಕುಟುಬಸ್ಥರು ಹುಡುಕಾಟ ನಡೆಸಿದರು. ಈ ಸಂದರ್ಭ ಬೋಪಯ್ಯ ಅವರಿಗೆ ಸೇರಿದ ಹಳೇ ಮನೆಯಲ್ಲಿ ಗುಂಡು ಹೊಡೆದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.








