ಮಡಿಕೇರಿ ನ.7 : ಕೊಡವರ ಸ್ವಯಂ ಶಾಸನದ ಜನ್ಮ ಭೂಮಿಯನ್ನು ಕಾಯ್ದೆಬದ್ಧವಾಗಿ ಸ್ಥಿರೀಕರಣಗೊಳಿಸಲು ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕನ್ನು ಸಂವಿಧಾನದ ವಿಧಿ 244 R/w 6 ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕರ್ನಾಟಕದ ಸ್ವಾಧೀನದೊಳಗೆ ಸಂಯೋಜಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.
ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ 9 ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಸಿಎನ್‍ಸಿ ಸಂಘಟನೆ 5ನೇ ಹಂತದ ಪಾದಯಾತ್ರೆಯನ್ನು ಆರಂಭಿಸಿತು.
ವಿರಾಜಪೇಟೆ ತಾಲ್ಲೂಕಿನ ಬೆಪ್ಪುನಾಡ್ ನ ಅರಮೇರಿ ಮಂದ್ ಮತ್ತು ಕಡಂಗ ಮುರೂರು ಮಂದ್ ನಲ್ಲಿ ಪಾದಯಾತ್ರೆ ಹಿನ್ನೆಲೆ ನಡೆದ ಕೊಡವ ಜನಜಾಗೃತಿ ಸಭೆಯ ನೇತೃತ್ವ ವಹಿಸಿ ನಾಚಪ್ಪ ಮಾತನಾಡಿದರು.
ಕೊಡಗಿನ ಅತ್ಯಂತ ಸೂಕ್ಷ್ಮ ಆದಿಮಸಂಜಾತ ಕೊಡವ ಜನಾಂಗಕ್ಕೆ ಸಂವಿಧಾನದ ಭದ್ರತೆಯ ಅಗತ್ಯವಿದೆ. ಸಂವಿಧಾನದಲ್ಲಿ ರೇಸ್/ಮೂಲ ವಂಶಸ್ಥ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರುವುದರಿಂದ ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ್ಮ, ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಭಾರತದ ಸಂವಿಧಾನ ಪರಿಶೀಲನಾ ಆಯೋಗವು ಶಿಫಾರಸ್ಸು ಮಾಡಿರುವ ವರದಿಯನ್ವಯ ಕೊಡವ ಲ್ಯಾಂಡ್ ಸ್ವಯಂ ಶಾಸನದ ಜನ್ಮ ಭೂಮಿಯನ್ನು ರಚಿಸಬೇಕು. ಕೊಡಗಿನ ಆದಿಮಸಂಜಾತ ಕೊಡವ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು.
ಕೊಡವ ಕಸ್ಟಮರಿ ಜನಾಂಗೀಯ “ಸಂಸ್ಕಾರ ಗನ್” ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು.
ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‍ಗೆ ಸೇರಿಸಬೇಕು. ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು.
ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ (ಕೊಡವ ಶಾಸ್ತ್ರದ ಜಾಗತಿಕ ಸಂಶೋಧನಾ ಅಧ್ಯಯನ ಕೇಂದ್ರ) ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು.
ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ನೀಡಬೇಕು. ಕಾವೇರಿಯು ವೇದ ಕಾಲದ 7 ಪವಿತ್ರ ನದಿಗಳಲ್ಲಿ ಒಂದಾಗಿದೆ. ಜಲದೇವತೆ ಕಾವೇರಿಯ ಜನ್ಮಸ್ಥಳವನ್ನು ಸರ್ಕಾರವು ಪೂಜ್ಯ ಭಾವನೆಯಿಂದ ಗೌರವಿಸಬೇಕು. ಯಹೂದಿ ಜನರ ಮೌಂಟ್ ಮೊರೈಯಾ ದೇವನೆಲೆ ಮಾದರಿಯಲ್ಲಿ ಕೊಡವ ಜನಾಂಗದ ಪವಿತ್ರ ತೀರ್ಥಯಾತ್ರ ಕೇಂದ್ರವಾಗಿ ತಲಕಾವೇರಿಯನ್ನು ಪರಿಗಣಿಸಬೇಕು.
ಕಾವೇರಿ ನೀರಿನ 740 ಟಿಎಂಸಿ ವಾರ್ಷಿಕ ಇಳುವರಿಯಲ್ಲಿ, ಕೊಡವ ನೆಲದ ಪಾಲು 200 ಟಿಎಂಸಿ ಗಿಂತ ಹೆಚ್ಚು ಆಗಿದೆ. 1966 ರ ಹೆಲ್ಸಿಂಕಿ ನಿಯಮದ ಪ್ರಕಾರ ಕಾವೇರಿಯ ಪುಮುಖ ನೀರಿನ ಪಾಲನ್ನು ಕೊಡಗಿನಲ್ಲಿ ಬಳಸಿಕೊಳ್ಳುವಂತಾಗಬೇಕು.
ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ಘಟಿಸಿದ ಅಮಾಯಕ ಕೊಡವರ ರಾಜಕೀಯ ಹತ್ಯೆಗಳ ನೆನಪಿನ ಸ್ಮಾರಕಗಳನ್ನು ಸ್ಥಾಪಿಸಬೇಕು. ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಕೊಡವರ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ದೇವಾಟ್ ಪರಂಟ್ ನಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕಗಳನ್ನು ನಮ್ಮ ಸಂವಿಧಾನದ 49 ವಿಧಿ ಅಡಿಯಲ್ಲಿ ಮತ್ತು 1964 ರ ವೆನಿಸ್ ಘೋಷಣೆ ಯಂತೆ ನಿರ್ಮಿಸಬೇಕು. ಈ ಎರಡೂ ದುರಂತಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ (ಯು.ಎನ್.ಓ) ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು.
ದೇವಾಟ್ ಪರಂಟ್ ಪ್ರಾಚೀನ ಯುದ್ಧಭೂಮಿಯಾಗಿದೆ ಮತ್ತು ಇದು ಕೊಡವ ಜನಾಂಗದ ದೇಶ ಮಂದ್ ಆಗಿದೆ. ಪ್ರಾಚೀನ ಯುದ್ಧಭೂಮಿಗಳಾದ ಕುರುಕ್ಷೇತ್ರ, ಕಳಿಂಗ ಮತ್ತು ವಾಟಲ್ರ್ಲೂ ಗಳನ್ನು ಪಾರಂಪರಿಕ ತಾಣಗಳಾಗಿ ರಕ್ಷಿಸಿದ ಪರಿಯಲ್ಲೇ ಅವುಗಳಿಗೆ ಸಮಾನ ಪ್ರಾಮುಖ್ಯತೆಯಾಗಿ ಸಂರಕ್ಷಿಸಬೇಕು.
ಜನಸಂಖ್ಯಾ ಬದಲಾವಣೆಯನ್ನು/ಪಲ್ಲಟವನ್ನು ತಡೆಗಟ್ಟಲು, ನಮ್ಮ ಆನುವಂಶಿಕ ಸಮುದಾಯ ಆಸ್ತಿಗಳನ್ನು ಮತ್ತು ನಮ್ಮ ಆಧ್ಯಾತ್ಮಿಕ ಪಾರಮಾರ್ಥಿಕ ನೆಲೆಗಳಾದ ಮಂದ್, ದೇವಕಾಡ್, ತೂಟ್‍ಂಗಲ, ಕ್ಯಾಕೊಳ ಗಳನ್ನು ರಕ್ಷಿಸಬೇಕು. ಕೊಡವರ ಜನ್ಮ ಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಗೆ ಶಾಸನಬದ್ಧ ಅನುಮೋದನೆಗಾಗಿ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ಮಾದರಿಯಲ್ಲಿ ಇನ್ನರ್ ಲೈನ್ ಪರ್ಮಿಟ್ ಅನ್ನು ನೀಡಬೇಕು.
ಹೊಸ ಸಂಸತ್ತಿನಲ್ಲಿ ಕೊಡವ ಪ್ರಾತಿನಿಧ್ಯವನ್ನು ನೀಡಬೇಕು. ಕೇಂದ್ರ ವಿಸ್ತಾ 9 ಡಿಸೆಂಬರ್ 1946 ರಿಂದ 24 ಜನವರಿ 1950 ರವರೆಗೆ, ಕೊಡವ ಜನಾಂಗದ ಸದಸ್ಯರು ಭಾರತದ ಸಂವಿಧಾನ ಸಭೆಯಲ್ಲಿ ಕೂರ್ಗ್/ ಕೊಡವ ಪ್ರಾಂತ್ಯವನ್ನು ಪ್ರತಿನಿಧಿಸಿದ್ದರು. ಈಗ ಮತ್ತೆ ಕೊಡವರಿಗೆ ಅವಕಾಶ ನೀಡಬೇಕು ಎಂದು ನಾಚಪ್ಪ ಆಗ್ರಹಿಸಿದರು.
ಅರಮೇರಿ ಮಂದ್ ಮತ್ತು ಕಡಂಗ ಮುರೂರು ಮಂದ್ ನಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾಲ್ಗೊಂಡ ಕೊಡವ, ಕೊಡವತಿಯರು ಮಾನವ ಸರಪಳಿಯನ್ನು ರಚಿಸಿದರು. ಸೂರ್ಯ-ಚಂದ್ರ, ಮಾತೃ ಭೂಮಿ, ದೈವಿಕ ವಸಂತ ಕಾವೇರಿ, ಸಂವಿಧಾನ ಮತ್ತು ಗುರು- ಕರೋಣ ಹೆಸರಿನಲ್ಲಿ ಸಿಎನ್ಸಿ ಯ ಕೊಡವಲ್ಯಾಂಡ್ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಅರಮೇರಿ ಮಂದ್ ಮತ್ತು ಕಡಂಗ ಮುರೂರು ಮಂದ್ ನಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾಲ್ಗೊಂಡ ಕೊಡವ, ಕೊಡವತಿಯರು ಮಾನವ ಸರಪಳಿಯನ್ನು ರಚಿಸಿದರು. ಸೂರ್ಯ-ಚಂದ್ರ, ಮಾತೃ ಭೂಮಿ, ದೈವಿಕ ವಸಂತ ಕಾವೇರಿ, ಸಂವಿಧಾನ ಮತ್ತು ಗುರು- ಕರೋಣ ಹೆಸರಿನಲ್ಲಿ ಸಿಎನ್ಸಿ ಯ ಕೊಡವಲ್ಯಾಂಡ್ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಅಲ್ಮಂಡ ಸ್ವಾತಿ ರಂಜನ್, ಬಾಚಿರ ಕನ್ನಿಕೆ ಸುಬ್ರಮಣಿ, ಅಲ್ಮಂಡ ಸುನಿತಾ ಪೂಣಚ್ಚ, ಪೂಳಂಡ ಪದ್ಮಿನಿ ಪೂಣಚ್ಚ, ಬಾಚಿರ ಗೌರು ಉತ್ತಪ್ಪ, ನಂದಿನೆರವಂಡ ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಚೋಳಪಂಡ ಜ್ಯೋತಿ ನಾಣಯ್ಯ, ಬಾಚಿರ ಸುಮಿ ದೇವಯ್ಯ, ಸೋಮೆಯಂಡ ನಿಶ್, ಕಂಡ್ರತಂಡ ವಿಠಾ ಸುಬ್ಬಯ್ಯ, ರೀನಾ ಸೋಮೆಯಂಡ, ರತಿ ಪೂಳಂಡ, ಉಷಾ ನಾಯಕಂಡ, ಪೂಳಂಡ ಪವಿ ಅಪ್ಪಯ್ಯ, ನಾಯಕಂಡ ಹರ್ಷಿತಾ, ಉದಿಯಂಡ ಶಾಂತಿ ಜಯಕುಮಾರ್, ಕಂಡ್ರತಂಡ ಈಶ್ವರಿ, ಪೂಳಂಡ ವರ್ಷ, ಪೊಯ್ಯೆಟಿರ ಸುಚಿ ಅಶೋಕ್, ಸೋಮೆಯಂಡ ಕೆ.ಪೂವಮ್ಮ, ಪೊಯ್ಯೆಟಿರ ಸರಸ್ವತಿ ಹರೀಶ್, ಉದಿಯಂಡ ಶುಶಿ ಪೊನ್ನಪ್ಪ, ಸೋಮೆಯಂಡ ಪೂವಮ್ಮ, ಚೀಯಬೇರ ಸತೀಶ್, ಅಲ್ಮಂಡ ನೆಹರು, ಅಲ್ಮಂಡ ಜೀವನ್ ಬೋಪಣ್ಣ, ಪೂಲಂಡ ಪೂವಯ್ಯ, ಬಾಚೀರ ರಾಜ ದೇವಯ್ಯ, ಬಲ್ಲಚಂಡ ಸಂಪತ್ ಕುಟ್ಟಪ್ಪ, ಪಳಂಗಂಡ ಸುಬ್ರಮಣಿ, ಕಂಡ್ರತಂಡ ಪುಟ್ಟು ಸುಬ್ಬಯ್ಯ, ನಾಯಕಂಡ ರಾಯ್ ಅಯ್ಯಣ್ಣ, ಪಳಂಗಂಡ ಮೋಹನ್, ಬಡ್ಕಂಡ ಸುಬ್ರಮಣಿ, ಕಟ್ಟೇರ ಪೊನ್ನಪ್ಪ, ಅಲ್ಮಂಡ ಜೈ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಅಲ್ಮಂಡ ರಂಜನ್, ಅಲ್ಮಂಡ ಲವ, ಅಲ್ಮಂಡ ಡಾಲು ಪೂಣಚ್ಚ, ಪೂಳಂಡ ರಾಜ ಗಣಪತಿ, ಪಳಂಗಂಡ ರಾಕೇಶ್, ಅಮ್ಮಂಡ ಶರಣ್ ಅಯ್ಯಪ್ಪ, ಪೊಯ್ಯೆಟ್ಟಿರ ನಂದ, ಚೋಳಪಂಡ ನಾಣಯ್ಯ, ಸೋಮೆಯಂಡ ರೇಶ ತಿಮ್ಮಯ್ಯ, ಪೂಲಂಡ ಮಾಚಯ್ಯ, ಉದಿಯಂಡ ಚೆಂಗಪ್ಪ, ಐಚೆಟ್ಟಿರ ಸುಬ್ಬಯ್ಯ, ಐಚೆಟ್ಟಿರ ಕುಟ್ಟಯ್ಯ, ಪೂಲಂಡ ವಿಠಲ್, ಆಲ್ಮಂಡ ಪ್ರಸಾದ್, ಬಾಚಿರ ಚಿಣ್ಣಪ್ಪ, ಕಾಳಮಂಡ ಅಪ್ಪಚ್ಚು, ನಾಯಕಂಡ ವಾಸು, ಕಾಂಡೇರ ಸುರೇಶ್, ಪಾಲೆಕಂಡ ಜೀವನ್ ಬೊಳ್ಳಿಯಪ್ಪ, ಬಲ್ಲಚಂಡ ಉತ್ತಯ್ಯ, ಉದಿಯಂಡ ಪೊನ್ನಪ್ಪ, ಅಲ್ಮಂಡ ಪೂಣಚ್ಚ, ಅಮ್ಮುಣಿಚಂಡ ರಾಜ ನಂಜಪ್ಪ, ಪೆಮ್ಮಂಡ ಪ್ರಸಾದ್, ಪಾಲೆಕಂಡ ಸೋಮಯ್ಯ, ಪಾಲೆಕಂಡ ರಮೇಶ್, ಪೆಮ್ಮಂಡ ಅಯ್ಯಣ್ಣ, ಅಮ್ಮುಣಿಚಂಡ ವಿಜು ಕುಶಾಲಪ್ಪ, ಮುಂಡಚಾಡಿರ ಪೊನ್ನಪ್ಪ, ಚಂಬಂಡ ಜನತ್, ಪಾರ್ವಂಗಡ ನವೀನ್ ಅರಮೇರಿ ಮಂದ್ ಪಾದಯಾತ್ರೆ ಮತ್ತು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಡಂಗ್‌ಮುರೂರ್ ಊರ್ ಮಂದ್ ನಲ್ಲಿ ಬಲ್ಲಚಂಡ ಮಾದಯ್ಯ, ಬಲ್ಯಂಡ ಉದಯ, ಕಾಂಗಿರ ಅರ್ಜುನ, ಚೋಳಂಡ ರಮೇಶ್, ಪಾರ್ವಂಗಡ ನವೀನ್, ಕಾಂಡೇರ ಸುರೇಶ್, ಚಂಬಂಡ ಜನತ್, ಬಲ್ಲಚಂಡ ರಾಮು, ಪಟ್ಟಮಾಡ ಕುಶ, ಬಲ್ಲಚಂಡ ಉತ್ತಯ್ಯ, ಬಲ್ಲಚಂಡ ಉತ್ತಪ್ಪ, ಮಂದಪಂಡ ಮನೋಜ್, ಅಲ್ಮಂಡ ಜೈ, ಅಲ್ಮಂಡ ನೆಹರು, ಚೀಯಬೇರ ಸತೀಶ್, ಪಳಂಗಂಡ ಮೋಹನ್, ಬಲ್ಲಚಂಡ ಸಂಪತ್, ಬಲ್ಲಚಂಡ ರೂಪ ಸಂಪತ್, ಕೋದಂಡ ವೀಣಾ ಸುನಿಲ್, ಕರೋಟಿರ ಕಟ್ಟಿ, ಚೋಳಂಡ ಲೀಲಾ ಸೋಮಣ್ಣ, ಚೋಳಂಡ ಶಾಲಿನಿ ಮಾದಪ್ಪ, ಕಾಂಗೀರ ಜಯಂತಿ ವಾಸು, ಕಾಂಗೀರ ಸಜಿ ಸತೀಶ್, ಇಟ್ಟೀರ ಮಾಲ, ಚೋಳಂಡ ಪಿಂಕಿ, ಬಲ್ಯಂಡ ಪುಷ್ಪ, ಬಲ್ಯಂಡ ಭಾರತಿ, ಕೋದಂಡ ಮಂಜುಳ, ಅಪ್ಪಚಂಗಡ ಸುಬ್ಬಯ್ಯ, ಕೋದಂಡ ಸುರ, ಚೋಳಂಡ ಜಯ ಚೆಂಗಪ್ಪ, ಪಳಂಗಂಡ ಸುಬ್ರಮಣಿ, ಅಲ್ಮಂಡ ರಾಜ, ಕೋದಂಡ ಪೂವಯ್ಯ, ಚೋಳಂಡ ವಿಮಲಾ ನಾಣಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಚೋಳಪಂಡ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಕಾಂಗೀರ ಸತೀಶ್ ನಂಜಪ್ಪ, ಮುಕ್ಕಾಟಿರ ವಿನಿತಾ ಕಾವೇರಮ್ಮ, ಬಲ್ಲಟಿಕಾಳಂಡ ಮೌನಿತಾ ಸುಬ್ಬಯ್ಯ, ಕಾಂಗೀರ ಪುಷ್ಪಾ ಬೋಪಣ್ಣ, ಬಲ್ಲಚಂಡ ಬಿದ್ದಪ್ಪ, ಅಮ್ಮಂಡ ಈರಪ್ಪ, ಬಲ್ಲಟಿಕಾಳಂಡ ಮುದ್ದಯ್ಯ, ಕಾಂಗೀರ ವಿವೇಕಾನಂದ, ಕರೋಟಿರ ಬಿದ್ದಪ್ಪ, ಬೇಪಡಿಯಂಡ ದಿನು, ಪಳಂಗಂಡ ಜಯ ಕುಮಾರ್, ಬಲ್ಲಚಂಡ ದಿವ್ಯಾ ದಿನೇಶ್ ಪಾಲ್ಗೊಂಡಿದ್ದರು.
::: ನ.8 ರ ಪಾದಯಾತ್ರೆ :::
ನ.8ರಂದು ಬೆಳಗ್ಗೆ 10 ಗಂಟೆಗೆ ಕಡಿಯತ್‌ನಾಡ್ ನ ಕರಡದ “ಬೇಲಿಯಾಣೆ ಮಂದ್”, ಮಧ್ಯಾಹ್ನ 2.30 ಗಂಟೆಗೆ ಬಲಂಬೇರಿ ಮಂದ್, ನ.9 ರಂದು ಬೆಳಗ್ಗೆ 10 ಗಂಟೆಗೆ ಮಡಿಕೇರಿ ತಾಲ್ಲೂಕಿನ ನೂರಂಬಡನಾಡ್ ಮಂದ್, ಸಂಜೆ 4.30 ಗಂಟೆಗೆ ನೆಲಜಿನಾಡ್ ಮಂದ್ ನಲ್ಲಿ ಪಾದಯಾತ್ರೆ ಮತ್ತು ಜಾಗೃತಿ ಸಭೆ ನಡೆಯಲಿದೆ.