ಮಡಿಕೇರಿ ನ.15 :NEWS DESK ಬಣ್ಣ, ಪರಿಮಳ ಮತ್ತು ರುಚಿಗೆ ಮಾರು ಹೋಗುತ್ತಿರುವ ಗ್ರಾಹಕರು ಹಾಗೂ ಪ್ರವಾಸಿಗರಿಗೆ ಊಟ, ಉಪಹಾರ, ಬಿರಿಯಾನಿಯ ಹಿಂದಿನ ಅಸಲಿಯತ್ತನ್ನು ಮಡಿಕೇರಿ ನಗರಸಭೆ ಇಂದು ಬಿಚ್ಚಿಟ್ಟಿದೆ. ಅಶುಚಿತ್ವದ ವಾತಾವರಣ ಕಂಡು ಬೆಚ್ಚಿ ಬಿದ್ದಿದೆ. ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಎಸ್.ಸಿ.ಸತೀಶ್ ಅವರ ನೇತೃತ್ವದಲ್ಲಿ ಸದಸ್ಯರ ತಂಡ ವಿವಿಧ ಹೋಟೇಲ್, ಬೇಕರಿ, ಬಿರಿಯಾನಿ ಸೆಂಟರ್ ಗಳಿಗೆ ದಾಳಿ ಮಾಡಿತು. ಅಶುಚಿತ್ವ ಕಂಡು ಅಸಮಾಧಾನ ವ್ಯಕ್ತಪಡಿಸಿದ ಸಮಿತಿ ಹಲವರಿಗೆ ದಂಡ ವಿಧಿಸಿತು.NEWS DESK
ಸರ್ಕಾರಿ ಬಸ್ ನಿಲ್ದಾಣ, ಚೌಕಿ (ಇಂದಿರಾಗಾಂಧಿ ವೃತ್ತ) ಮತ್ತು ಹಳೆಯ ಖಾಸಗಿ ಬಸ್ ನಿಲ್ದಾಣ ವ್ಯಾಪ್ತಿಯ ಹೋಟೇಲ್, ಬೇಕರಿ, ಬಿರಿಯಾನಿ ಸೆಂಟರ್ ಗಳಿಗೆ ದಾಳಿ ಮಾಡಿದ ಸದಸ್ಯರು ಶುಚಿತ್ವ ಕಾಪಾಡದಿದ್ದರೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ನೀಡಿದರು. ಕೆಲವು ವ್ಯಾಪಾರಿಗಳು ಶುಚಿತ್ವಕ್ಕೆ ಆದ್ಯತೆ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸದಸ್ಯರುಗಳಾದ ಶ್ವೇತ ಪ್ರಶಾಂತ್, ಚಂದ್ರಶೇಖರ್, ನಗರಸಭೆಯ ಆರೋಗ್ಯ ಅಧಿಕಾರಿ ಸುರೇಶ್, ಇಂಜಿನಿಯರ್ ಸೌಮ್ಯ ಮತ್ತಿತರರು ದಾಳಿ ನಡೆಸಿದರು.NEWS DESK