ಮಡಿಕೇರಿ ನ.16 : ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನ.19 ರವರೆಗೆ ವಿರಾಜಪೇಟೆಯ ಬಾಳುಗೋಡುವಿನಲ್ಲಿ ನಡೆಯುವ “ಕೊಡವ ನಮ್ಮೆ” ಗೆ ಚಾಲನೆ ದೊರೆತ್ತಿದೆ. ಒಟ್ಟು 12 ಕೊಡವ ಸಮಾಜಗಳ ಹಾಕಿ ತಂಡಗಳ ನಡುವೆ ಪ್ರಶಸ್ತಿಗಾಗಿ ಹಣಾಹಣಿ ನಡೆಯಲಿದೆ.
ಕೊಡವ ಸಮಾಜಗಳ ನಡುವಿನ “ಹಾಕಿ ನಮ್ಮೆ” ಯನ್ನು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಉದ್ಘಾಟಿಸಿದರು.
ಅಮ್ಮತ್ತಿ ಮತ್ತು ಶ್ರೀಮಂಗಲ ಕೊಡವ ಸಮಾಜಗಳ ನಡುವೆ ಪ್ರಥಮ ಪಂದ್ಯ ನಡೆಯಿತು. ಬಾಳುಗೋಡುವಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಾಂಸ್ಕೃತಿಕ ಕೇಂದ್ರ ಹಾಗೂ ಜನರಲ್ ತಿಮ್ಮಯ್ಯ ಕ್ರೀಡಾ ಕೇಂದ್ರದಲ್ಲಿ ಭಾನುವಾರದವರೆಗೆ “ಕೊಡವ ನಮ್ಮೆ” ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೊನ್ನಪ್ಪ, ಊಟೋಪಚಾರ ಸಮಿತಿ ಅಧ್ಯಕ್ಷ ಕುಂಬೇರ ಮನುಕುಮಾರ್, ಆಟೋಟ ಸಮಿತಿ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಸಂಚಾಲಕ ಕಂಬೀರಂಡ ಕಿಟ್ಟು ಕಾಳಪ್ಪ, ಪಂದ್ಯಾಟದ ತಾಂತ್ರಿಕ ಸಮಿತಿ ನಿರ್ದೇಶಕ ಅಚ್ಚಕಾಳಿರ ಪಳಂಗಪ್ಪ, ಸದಸ್ಯ ಪಟ್ಟಡ ಮನು ರಾಮಚಂದ್ರ, ಸಾಂಸ್ಕೃತಿಕ ಸಮಿತಿ ಸಂಚಾಲಕ ಬೊಳ್ಳಿಯಂಗಡ ದಾದು ಪೂವಯ್ಯ ಹಾಗೂ ಕೊಡವ ಸಮಾಜಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Breaking News
- *ಹೊಸ್ಕೇರಿಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ*
- *ಕೊಡಗು : ಸಹಕಾರ ಸಂಘಗಳ ಸುಸ್ಥಿರತೆಗೆ ಎಲ್ಲರೂ ಶ್ರಮಿಸಿ : ಕೆ.ಎನ್.ರಾಜಣ್ಣ ಸಲಹೆ*
- *ಮಡಿಕೇರಿಯಲ್ಲಿ ಪೌರಕಾರ್ಮಿಕರ ದಿನಾಚರಣೆ : ಪೌರಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ : ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*