ವಿರಾಜಪೇಟೆ ನ.16 : ಕೊಡಗು ರಮ್ಯ ಪರಿಸರದ, ಪ್ರಕೃತಿ ಸೊಬಗಿನ ನಾಡು, ಇದು ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ. ಇದನ್ನೆ ಕುಂಚದಲ್ಲಿ ಅರಳಿಸಿದರೆ ಉತ್ತಮ ಕಲಾ ಚಿತ್ರ ಮೂಡಿ ಬರುತ್ತದೆ. ಆದರಿಂದ ಕಲಾವಿದರಿಗೆ ಒತ್ತಾಸೆ ನೀಡುವಂತಹ ತಾಣಗಳನ್ನು ಆರಿಸಿ ಚಿತ್ರ ಕಲಾ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಕೊಡಗು ಜಾನಪದ ಪರಿಷತ್ತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಮೊಗರಗಲ್ಲಿಯಲ್ಲಿ ಸಾಧಿಕ್ ಅರ್ಟ್ ಗ್ಯಾಲರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಲಾ ಉತ್ಸವ 2023 ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅನಂತಶಯನ ಅವರು ಕಲೆ, ಸಾಹಿತ್ಯಕ್ಕೆ ಕೊಡಗು ಮರುಭೂಮಿಯಂತೆ ಎನ್ನುತ್ತಾರೆ, ವಿದ್ಯಾವಂತರಿದ್ದರು ಕಲೆ, ಸಾಹಿತ್ಯ ಕಾರ್ಯಕ್ರಮಗಳಿಗೆ ಬರುವುದಿಲ್ಲ ಹಾಗೂ ಪ್ರೋತ್ಸಾಹ ನೀಡುವುದಿಲ್ಲ. ಆದರಿಂದ ಆರ್ಥಿಕ ಮತ್ತು ಪ್ರೋತ್ಸಾಹ ನೀಡಿ ಕಲಾವಿದರಿಗೆ ವೇದಿಕೆ ಒದಗಿಸಬೇಕು. ನಮ್ಮಲ್ಲಿ ಹೆಸರಾಂತ ಕಲಾವಿದರು ಅನೇಕರಿದ್ದಾರೆ. ಅವರಿಗೆ ನಾವು ಸದಾ ಜೊತೆಯಾಗಿ ನಿಂತು ಸಹಕಾರ ನೀಡಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಜೊತೆಗೆ ಪ್ರತಿಯೊಂದು ಕೆಲಸವನ್ನು ಮಾಡಲು ಸಿದ್ದರಿರಬೇಕು. ಕೊಡಗಿನ ಬಹುಮುಖ ಕಲೆಗಳು ರಾಜ್ಯವಲ್ಲದೆ ದೇಶದಂತ್ಯಾಂತ ಪ್ರಖ್ಯಾತಿಗೊಳ್ಳಬೇಕು, ಜಿಲ್ಲೆಯ ಪ್ರತಿಯೊಬ್ಬ ಚಿತ್ರಕಲೆಗಾರನಿಗೂ ಗೌರವ ಲಭಿಸಿದಲ್ಲಿ ಚಿತ್ರಕಲೆಯು ಜೀವಂತವಾಗಿರುಸುವಲ್ಲಿ ಸಂದೇಹವಿಲ್ಲ. ಚಿತ್ರಕಲೆಯ ಶಿಕ್ಷಣದಲ್ಲಿ ವಿಧ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಜಿಲ್ಲೆಯ ವಿದ್ಯಾರ್ಥಿಗಳು ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಕಲೆಗೆ ಹೊಸ ಅಧ್ಯಾಯ ತೋರಿಸಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಕೊಡಗು ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ, ಕೊಡಗು ಜಿಲ್ಲೆಯು ಕ್ರೀಡೆ, ಸಂಸ್ಕೃತಿ, ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಅದರಂತೆ ಎಲೆಯ ಮರೆಯ ಕಾಯಿಯಂತೆ ಚಿತ್ರಕಲೆಯು ಒಂದು ಭಾಗವಾಗಿ ಇಂದು ಅನೇಕ ಹೆಸರುವಾಸಿ ಚಿತ್ರಕಲಾವಿದರನ್ನು ಪುಟ್ಟ ಜಿಲ್ಲೆಯು ಹುಟ್ಟುಹಾಕುತ್ತಿದೆ. ವಿರಾಜಪೇಟೆಯ ನಗರದ ನಿವಾಸಿ ಹಾಗು ಹವ್ಯಾಸಿ ಚಿತ್ರಕಲಾವಿದ ಸಾದಿಕ್ ಹಂಸ ಅವರ ಅವಿರತ ಶ್ರಮದಿಂದ ಕಲಾ ಉತ್ಸವ ಕೊಡಗು ಕಾರ್ಯಕ್ರಮ ನಡೆಯುತ್ತಿದ್ದು ಶಿಬಿರದಲ್ಲಿ ಸಾರ್ವಜನಿಕರು ಸೇರಿದಂತೆ ಶಾಲಾ ವಿಧ್ಯಾರ್ಥಿಗಳು ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಬಹುದು. ಸಾದಿಕ್ ಕಲೆಗೆ ಒಂದು ವೇದಿಕೆ ಸೃಷ್ಟಿ ಮಾಡಿದ್ದಾರೆ, ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಚಿತ್ರಕಲೆಯನ್ನು ಪರಿಚಯಿಸುವ ವೇದಿಕೆ ನೀಡಿದ್ದಲ್ಲಿ ಕೊಡಗು ಜಿಲ್ಲೆಯಲ್ಲಿರುವ ಚಿತ್ರಕಲೆಗಾರರ ಚಿತ್ರಗಳ ಬಿಕರಿಯೊಂದಿಗೆ ಚಿತ್ರಕಲೆಗೆ ಪ್ರೋತ್ಸಾಹ ನೀಡಿದಾಂತಗುತ್ತದೆ ಎಂದರು.
ವಿರಾಜಪೇಟೆ ರೋಟರಿ ಅಧ್ಯಕ್ಷ ಬನ್ಸಿ ಪೂವಯ್ಯ ಮಾತನಾಡಿ, ಕಲಾವಿದರಿಗೆ ಮುಖ್ಯವಾಗಿ ಏಕಾಗ್ರತೆ ಬೇಕು. ಜೊತೆಗೆ ಪ್ರೋತ್ಸಾಹ ಹಾಗೂ ಅವಕಾಶಗಳು ದೊರೆಯುವಂತಾಗಬೇಕು, ಕಲೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಿಬೇಕು ಎಂದರು.
ಜಿಲ್ಲಾ ಜಾನಪದ ಪರಿಷತ್ತಿನ ಖಜಾಂಚಿ ಸಂಪತ್ ಕುಮರ್ ಮಾತನಾಡಿ ನಮ್ಮ ಕಾವೇರಿ ತಪೋ ಭೂಮಿಯಲ್ಲಿ ಅನೇಕ ಮಹಾನ್ ಕಲಾವಿದರಿದ್ದಾರೆ. ಕಲಾವಿದನಿಗೆ ಪ್ರತಿಯೊಂದು ವಸ್ತು ಕೂಡ ವಿಭಿನ್ನವಾಗಿ ಕಾಣಿಸುತ್ತದೆ. ಆದರೆ ಕಲಾವಿದರಿಗೆ ವೇದಿಕೆಯ ಅಗತ್ಯವಿದೆ, ಆ ಮೂಲಕ ಅವರನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.
ಉಪ ತಹಸೀಲ್ದಾರ್ ಪ್ರದೀಪ್ ಕುಮಾರ್ ಚಾಲನೆ ನೀಡಿ, ಕಾರ್ಯಕ್ರಮಕ್ಕೆ ಶುಭಕೋರಿದರು.
ಶಿಬಿರ ಆಯೋಜಕ ಚಿತ್ರ ಕಲಾವಿದ ಸಾಧಿಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ಮಾಲ್ದಾರೆಯ ಬಾವ, ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಸಾಹಿತಿಗಳಾದ ರಜಿತ ಕಾರ್ಯಪ್ಪ ಪಾಲ್ಗೊಂಡಿದ್ದರು.
ಕಲಾವಿದರುಗಳ ಕಲಾ ಚಿತ್ರಗಳನ್ನು ಇದೇ ಸಂದರ್ಭ ಪ್ರದರ್ಶಿಸಲಾಯಿತು.
ಬೆಂಗಳೂರಿನ ಮಂಜುಗೌಡ ಹಲವರ ಭಾವಚಿತ್ರವನ್ನು ಸ್ಥಳದಲ್ಲೇ ಬಿಡಿಸಿ ಎಲ್ಲೆ ಮೆಚ್ಚುಗೆಗೆ ಪಾತ್ರರಾದರು.
Breaking News
- *ವಿಟಿಯು ರಾಜ್ಯಮಟ್ಟದ ಕಬಡ್ಡಿ : ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ*
- *ವೀರ ಸೇನಾನಿಗಳಿಗೆ ಅಗೌರವ : ಆಮ್ ಆದ್ಮಿ ಪಾರ್ಟಿ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ*
- *ವಿರಾಜಪೇಟೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಿಂದ ಸ್ಥಳ ಪರಿಶೀಲನೆ*
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ*
- *ಕಬ್ಬಚ್ಚಿರ ರಶ್ಮಿ ಕಾರ್ಯಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ*
- *ಬೋಯಿಕೆರಿ ಅಂಗನವಾಡಿಯಲ್ಲಿ ನಿವೃತ್ತ ಕಾರ್ಯಕರ್ತೆಯರಿಗೆ ಬೀಳ್ಕೊಡುಗೆ : ಸಂಸ್ಕಾರವಂತ ಸಮಾಜ ನಿರ್ಮಾಣದ ರೂವಾರಿಗಳು ಅಂಗನವಾಡಿ ತಾಯಂದಿರು : ತೆನ್ನಿರ ಮೈನಾ ಶ್ಲಾಘನೆ*
- *ವ್ಯಾoಡಮ್ ಎಂಟರ್ಪ್ರೈಸಸ್ ನ ವಾರ್ಷಿಕೋತ್ಸವ : ನ.24 ರಂದು ಲಕ್ಕಿ ಡ್ರಾ ಸಮಾರಂಭ*
- *ಮಾದರಿ ವಿಶೇಷಚೇತನರ ಸ್ವ ಸಹಾಯ ಸಂಘ ಹಾಗೂ ಮಾದರಿ ಗ್ರಾಮ/ ಪಟ್ಟಣ ಪಂಚಾಯತ್ ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಹೊಸ್ಕೇರಿಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ*