ನಾಪೋಕ್ಲು ನ.29 : ಹಳೇ ತಾಲೂಕಿನಲ್ಲಿ ಕೊಡಗಿನ ಸುಗ್ಗಿಯ ಹಬ್ಬ ಪುತ್ತರಿಯನ್ನು ಕೊಡವರು ಹಾಗೂ ಮುಸ್ಲಿಂ ಬಾಂಧವರು ಪಾಲ್ಗೊಂಡು ಸಂಭ್ರಮದಿಂದ ಆಚರಿಸಿದರು.
ವರ್ಷ ಪ್ರತಿ ಇಲ್ಲಿನ ಹಿರಿಯ ಬೊಪ್ಪೇರ ಕಾವೇರಪ್ಪ(98) ಮತ್ತು ಅವರ ಮಗ ಜಯ ಉತ್ತಪ್ಪ ತಮ್ಮ ಮನೆಯಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದ್ದು, ಇಲ್ಲಿನ ಮುಸ್ಲಿಂ ಜನಾಂಗದವರು ಸುಮಾರು 50 ವರ್ಷಗಳಿಂದ ಪುತ್ತರಿ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸೌರ್ಹಾದತೆ, ಸಾಮರಸ್ಯಕ್ಕೆ ಸಾಕ್ಷಿಯಾದರು.
ನಂತರ ನೆರೆ ಕಟ್ಟಿ, ಕದಿರು ತೆಗೆದು, ಪ್ರಸಾದವನ್ನು ಸ್ವೀಕರಿಸಿ ಹಬ್ಬವನ್ನು ಆಚರಿಸಿದರು.
ಈ ಸಂದರ್ಭ ಮಹಮ್ಮದ್ ಅಲಿ, ಅಬೂಬಕ್ಕರ್, ಕಮರುದ್ದೀನ್, ಅಬ್ದುಲ್ ರೆಹಮಾನ್ ಸೇರಿದಂತೆ ಸುಮಾರು 45 ಜನರು ಭಾಗವಹಿಸಿದ್ದರು.
ನಾವು ಪ್ರತಿ ವರ್ಷವು ಪುತ್ತರಿ ಹಬ್ಬವನ್ನು ಆಚರಿಸುತಾ ಬರುತ್ತಿದ್ದು, ನಮ್ಮ ನೆರೆಯವರಾದ ಮುಸ್ಲಿಂ ಬಾಂಧವರು ಪ್ರತಿ ವರ್ಷವು ನಮ್ಮ ಮನೆಗೆ ಬಂದು ಹಬ್ಬದಲ್ಲಿ ಪಾಲ್ಗುಳ್ಳುತ್ತಾರೆ. ನಾವೇಲ್ಲರು ಸಹೋದರರಂತೆ ಅವರನ್ನು ಬರಮಾಡಿಕೊಂಡು ಹಬ್ಬವನ್ನು ಆಚರಿಸುತ್ತೇವೆ.ಇದು ಸೌರ್ಹಾದತೆ, ಸಾಮರಸ್ಯ ಕ್ಕೆ ಕಾರಣವಾಗಿದೆ ಎಂದರು. :: ಹಿರಿಯ ಬೊಪ್ಪೇರ ಕಾವೇರಪ್ಪ(98), ಹಳೆ ತಾಲೂಕು ::
ನಮಗೆಲ್ಲರಿಗೂ ಈ ಮನೆ ದೊಡ್ಡ (ಐನ್) ಮನೆ ಇದ್ದಂತೆ. ಪ್ರತಿ ವರ್ಷ ಕುಟುಂಬದ ಸದಸ್ಯರು ಒಟ್ಟು ಸೇರಿ ಸಹೋದರರಂತೆ ಅರ್ಥಪೂರ್ಣವಾಗಿ ಸೌಹಾರ್ದತೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುತ್ತರಿ ಹಬ್ಬವನ್ನು ಆಚರಿಸುತ್ತಿರುವುದು ತುಂಬಾ ಹರ್ಷ ತಂದಿದೆ :: ಎಂ.ಎಸ್ ಇಬ್ರಾಹಿಂ, ಹಳೆ ತಾಲೂಕು ::
ನಮ್ಮ ಸುತ್ತಮುತ್ತಲಿನ ಸುಮಾರು ಐವತ್ತು ಮುಸ್ಲಿಂ ಬಾಂಧವರು ಉತ್ತರಿ ಹಬ್ಬದಲಿ ಭಾಗವಹಿಸಿ ಗದ್ದೆಯಿಂದ ಕದಿರು ತಂದು ಒಂದೇ ಕುಟುಂಬದಂತೆ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುತ್ತೇವೆ :: ದಿವ್ಯ. ಜಯ ಉತ್ತಪ್ಪನವರ ಪತ್ನಿ ::
ವರದಿ : ದುಗ್ಗಳ ಸದಾನಂದ