ಮಡಿಕೇರಿ ಡಿ.6 : ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಘೋಷಿಸಿದಂತೆ ಸಮಯಕ್ಕೆ ಸರಿಯಾಗಿ ಅಧಿವೇಶನಕ್ಕೆ ಹಾಜರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ, ಸ್ಪೀಕರ್ ಯು.ಟಿ.ಖಾದರ್ ರಾಷ್ಟ್ರ ಮತ್ತು ರಾಜ್ಯ ಲಾಂಛನವಿರುವ ವಿಶಿಷ್ಟವಾಗಿ ತಯಾರಿಸಿದ ಕಪ್ ಮತ್ತು ಸಾಸರ್ ನ್ನು ಬಹುಮಾನವಾಗಿ ವಿತರಿಸಿದರು.







