ಮಡಿಕೇರಿ ಡಿ.11 : ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತೀ ವರ್ಷ ರೂಢಿ ಸಂಪ್ರದಾಯದಂತೆ ಸಂಪ್ರೋಕ್ಷಣೆಯನ್ನು ನಡೆಸಿಕೊಂಡು ಬರುತ್ತಿರುವ ಹಿನ್ನಲೆಯಲ್ಲಿ ಈ ವರ್ಷವೂ ಉಚ್ಚಿಲ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಡಿ.16 ರಿಂದ ಡಿ.19 ರವರೆಗೆ ಸಂಪ್ರೋಕ್ಷಣೆ” ಕಾರ್ಯಕ್ರಮ ನಡೆಯಲಿದೆ.
ಶ್ರೀ ತಲಕಾವೇರಿ ದೇವಾಲಯದಲ್ಲಿ ಡಿ.16 ರಂದು ಬೆಳಗ್ಗೆ 7.30 ಗಂಟೆಗೆ ಗಣಹೋಮ, ಸಂಪ್ರೋಕ್ಷಣೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ.
ಭಗಂಡೇಶ್ವರ ದೇವಾಲಯದಲ್ಲಿ ಡಿ.17 ರಂದು ಬೆಳಗ್ಗೆ 7.30 ಗಂಟೆಗೆ ಗಣಪತಿ ಹೋಮ, ಸಂಪ್ರೋಕ್ಷಣೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ಭೂತ ಬಲಿ, ಶ್ರೀ ಭಗಂಡೇಶ್ವರ ದೇವರ ಉತ್ಸವ ನಡೆಯಲಿದೆ.
ಡಿ.18 ರಂದು ಬೆಳಗ್ಗೆ 7.30 ಗಂಟೆಗೆ ಗಣಹೋಮ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ, ಸಂಪ್ರೋಕ್ಷಣೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ಭೂತ ಬಲಿ, ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಲಿದೆ.
ಡಿ.19 ರಂದು ಬೆಳಗ್ಗೆ 7.30 ಗಂಟೆಗೆ ಗಣಹೋಮ ಶ್ರೀ ಮಹಾವಿಷ್ಣು ಮತ್ತು ಪರಿವಾರ ದೇವರುಗಳ ಶುದ್ಧಿ ಕಲಶ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ರಾತ್ರಿ ಶ್ರೀ ಭೂತ ಬಲಿ, ಮಹಾವಿಷ್ಣು ದೇವರ ಉತ್ಸವ ನಡೆಯಲಿದೆ.
ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಎಂದು ಶ್ರೀ ಭಗಂಡೇಶ್ವರ-ತಲಕಾವೇರಿ ಮತ್ತು ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ಚಂದ್ರಶೇಖರ್ ತಿಳಿಸಿದ್ದಾರೆ.









