ಮಡಿಕೇರಿ ಡಿ.11 : . ಪೊನ್ನಂಪೇಟೆ ತಾಲೂಕು ಬಾಳಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಪಿ.ಜಿ ಜಾನಕಿ ಮತ್ತು ಗೌರವ ಕೋಶಾಧಿಕಾರಿಯಾಗಿ ಚಂದ್ರಕಲಾ ವಿಷ್ಣುಮೂರ್ತಿ ಆಯ್ಕೆಯಾಗಿದ್ದಾರೆ.
ಹೋಬಳಿ ಅಧ್ಯಕ್ಷರಾದ ಪಡಿಞಾರಂಡ ಪ್ರಭು ಮತ್ತು ತಾಲೂಕು ಅಧ್ಯಕ್ಷರಾದ ಕೋಳೆರ ದಯಾ ಚಂಗಪ್ಪ ಅವರ ಶಿಫಾರಸ್ಸು ಮೇರೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ನೇಮಕ ಮಾಡಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನಿರ್ ಅಹಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








