ಮಡಿಕೇರಿ ಡಿ.23 : ಕ್ರಿಸ್ ಮಸ್ ಮತ್ತು ಹೊಸವಷಾ೯ಚರಣೆ ಸಂದಭ೯ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಹಿನ್ನಲೆಯಲ್ಲಿ ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ನೀಡಲಾಗಿದ್ದ ಮಂಗಳವಾರದ ವಾರದ ರಜೆಯನ್ನು ರದ್ದುಗೊಳಿಸಿ, ಡಿ.26 ರಂದು ಮ್ಯೂಸಿಯಂನ್ನು ಸಂದಶ೯ಕರಿಗಾಗಿ ತೆರೆಯಲಾಗುತ್ತದೆ.
ಹೀಗಾಗಿ ಸಂದಶ೯ಕರು, ಪ್ರವಾಸಿಗರು ಡಿ.26 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.










