ಗೋಣಿಕೊಪ್ಪ ಡಿ.28 : ಪ್ರೋ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ಸಂಚಾಲಕರಾಗಿ ಸತೀಶ್ ಸಿಂಗಿ ಹೆಚ್.ಆರ್. ಅವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರಿನ ವಿಕಾಸ ಸೌಧ ಸಮೀಪದ ಕ.ದ.ಸ.ಸಂ. ಕಚೇರಿಯಲ್ಲಿ ರಾಜ್ಯ ಸಂಚಾಲಕ ಡಿ.ಆರ್.ಪಾಡುರಂಗ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ನೇಮಕಾತಿಯ ಆದೇಶವನ್ನು ನೀಡಲಾಗಿದೆ.
ರಾಜ್ಯ ಸಂಘಟನಾ ಸಂಚಾಲಕರಾಗಿ ಟಿ.ಎನ್.ಗೋವಿಂದಪ್ಪ, ತಾಲೂಕು ಸಂಚಾಲಕರಾಗಿ ಚಂದ್ರ ಮತ್ತು ಮಹಿಳಾ ಘಟಕಕ್ಕೆ ಲಕ್ಷ್ಮಿ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಆತಂರಿಕ ಶಿಸ್ತು ಮತ್ತು ತರಬೇತಿ ವಿಭಾಗದ ಸಂಚಾಲಕ ತೆರಿಕೇರಿ ವೆಂಕಟೇಶ್ ತಿಳಿಸಿದ್ದಾರೆ.
ಫೆ.4 ರಂದು ನೂತನವಾಗಿ ಆಯ್ಕೆಯಾದವರ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ಸಂಚಾಲಕ ಡಿ.ಆರ್.ಪಾಡುರಂಗ ಸ್ವಾಮಿ ಮಾಹಿತಿ ನೀಡಿದ್ದಾರೆ.
ರಾಜ್ಯ ಸಂಘಟನಾ ಸಂಚಾಲಕ ಕೊಡಿಗಲ್ ರಮೇಶ್, ಹಿಂದುಳಿದ ಅಲ್ಪಸಂಖ್ಯಾತರ ವಿಭಾಗದ ಮಾರುತಿ ಬಿ.ಹೊಸಮನಿ, ಗುಲ್ಬರ್ಗ ಅಂಗಸಂಸ್ಥೆ ವಿಭಾಗದ ಶಿವನಂದ ಎಂ.ಸವಂಗಿ, ಕೋಲಾರ ಕುಂದುಕೊರತೆ ವಿಭಾಗದ ಡಾ. ಎಂ. ಸೋಮಶೇಖರ್, ಹಾಸನ ಧರ್ಮ ಮತ್ತು ಪ್ರಕಾಶನ ವಿಭಾಗದ ಎ.ಎಲ್. ಬಾಸ್ಕರ್, ರಾಜಕೀಯ ನಿರ್ಣಯಗಳ ವಿಭಾಗದ ಅಂಜಯ್ಯ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ದುರ್ಗಾ ದಾಸ್ ಪಿ, ರಾಜ್ಯ ಖಜಾಂಚಿ ಹೆಚ್. ಮುನಿಯಪ್ಪ, ಕಾನೂನು ಸಲಹೆಗಾರ ಎನ್. ಶಿವಕುಮಾರ್ ಇದ್ದರು.