ಮಡಿಕೇರಿ ಡಿ.28 : ಮತ್ತೆ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಎಂ ಎಲ್ ಸಿ ಜಗದೀಶ್ ಶೆಟ್ಟರ್ ಸ್ಪಷ್ಟ ಪಡಿಸಿದ್ದಾರೆ.
ಕುಶಾಲನಗರದ ಬಳಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ ನನ್ನನ್ನು ಯಾರು ಕರೆದಿಲ್ಲ ಎಂದು ಕೂಡ ಹೇಳಿದರು.
ಬಿಎಸ್ ವೈ ಸರ್ಕಾರದ ವಿರುದ್ಧ ಯತ್ನಾಳ್ 40,000 ಕೋಟಿ ಅಕ್ರಮ ಆರೋಪ ವಿಚಾರ ಬಗ್ಗೆ ಉತ್ತರಿಸಿದ ಶೆಟ್ಟರ್ ಭ್ರಷ್ಟಚಾರದ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಇದೀಗ ಎಲ್ಲಾ ಹೊರಗೆ ಬರುತ್ತಿದೆ. ಈಗಾಗಲೇ ಸಿದ್ದರಾಮಯ್ಯರ ಸರ್ಕಾರ ತನಿಖೆ ಸಮಿತಿ ರಚಿಸಿದೆ. ತನಿಖೆ ನಡೆಯುತ್ತಿದೆ. ಯತ್ನಾಳ್ ಮಾಹಿತಿ ತೆಗೆದುಕೊಂಡು ತನಿಖೆ ಮಾಡಿದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಎಂದ ಶೆಟ್ಟರ್ ಯತ್ನಾಳ್ ಆರೋಪದ ಬಗ್ಗೆ ದಾಖಲೆ ಕೊಟ್ರೆ ತನಿಖೆಗೆ ಅನುಕೂಲ ಆಗಲಿದೆ ಎಂದರು.