Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಎಚ್1-ಎನ್1 : ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆ*
  • *ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*
  • *ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*
  • ಕೊಡಗಿನಲ್ಲಿ ಕರವೇ ಸ್ವಾಭಿಮಾನಿ ಸೇನೆಗೆ ನೂತನ ಸದಸ್ಯರ ಸೇರ್ಪಡೆ
  • *ತೀವ್ರಗೊಳಿಸಿದ ಐಇಸಿ ಅಭಿಯಾನ : ಮ್ಯಾರಥಾನ್ ಮೂಲಕ ಎಚ್‌ಐವಿ/ಏಡ್ಸ್ ಜಾಗೃತಿ*
  • *ಮಡಿಕೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ : ಸ್ವಾವಲಂಬಿ ಮಹಿಳಾ ಫಲಾನುಭವಿಗಳ ಗುರುತಿಸಿ ಸನ್ಮಾನಕ್ಕೆ ಕ್ರಮ*
  • *ಶಿಸ್ತುಬದ್ಧ ಶಿಕ್ಷಣದಿಂದಲೇ ಸಮಾಜದ ಯಶಸ್ಸು, ದೇಶದ ಪ್ರಗತಿ : ಶಾಸಕ ಎ.ಎಸ್.ಪೊನ್ನಣ್ಣ*
  • *ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಶಿಸ್ತುಬದ್ಧ ಜೀವನವೇ ಸಾಧನೆಯ ದಾರಿದೀಪ: ಕರ್ನಲ್ ಸಂಜೀವ್ ಕುಮಾರ್*
  • *ಕೊಡಗು ವಿದ್ಯಾಲಯದಲ್ಲಿ ಬ್ರಹ್ಮಗಿರಿ ಸಹೋದಯ ಸಿಬಿಎಸ್ಇ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ*
  • *ಮಡಿಕೇರಿ ನಗರಸಭೆ : ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನಕ್ಕೆ ಒತ್ತು : ಶಾಸಕ ಮಂತರ್ ಗೌಡ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಸಹಸ್ರ ಕಾರ್ತಿಕ ದೀಪೋತ್ಸವ : ಸ್ವಾಸ್ಥ್ಯ ಸಮಾಜಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ : ಶಾಸಕ ಡಾ.ಮಂಥರ್ ಗೌಡ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಸಹಸ್ರ ಕಾರ್ತಿಕ ದೀಪೋತ್ಸವ : ಸ್ವಾಸ್ಥ್ಯ ಸಮಾಜಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ : ಶಾಸಕ ಡಾ.ಮಂಥರ್ ಗೌಡ*

ಡಿಸೆಂಬರ್ 29, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಶನಿವಾರಸಂತೆ ಡಿ.29 : ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಠಗಳ ಪಾತ್ರ ಅತ್ಯಂತ ಮಹತ್ವದ್ದು, ಅಂತಹ ಮಹತ್ತರ ಪಾತ್ರದೊಂದಿಗೆ ಸಮಾಜಕ್ಕೆ ತನ್ನದೇ ಆದ ಕಾಣಿಕೆಯನ್ನು ಮನೆಹಳ್ಳಿ ಮಠ ನೀಡುತ್ತಿದೆ, ಹಿಂದೂ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ ಗುರುವು ಶಿಷ್ಯನನ್ನುದ್ಧರಿಸುವ ಕಾರ್ಯ ಮಾಡಿದರೆ, ಶಿಷ್ಯ ಗುರುವಿನ ಸೇವೆ ಮಾಡಿ ತನ್ನ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುತ್ತಾನೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು.
ಶನಿವಾರಸಂತೆ ಸಮೀಪದ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಹುಣ್ಣಿಮೆ ರಾತ್ರಿ ನಡೆದ ಸಹಸ್ರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕೊಡಗಿನ ಮಠಗಳಿಗೆ ಸರ್ಕಾರದಿಂದ ಅಥವಾ ವೈಯಕ್ತಿಕವಾಗಿ ನನ್ನಿಂದ ಸಾಮಾನ್ಯ ಭಕ್ತರ ಸರದಿ ಸಾಲಿನಲ್ಲೇ ಸೇವೆ ಮಾಡಲು ಸದಾ ಸಿದ್ದನಿದ್ದೇನೆ ಎಂದರು.
ಹಿರಿಯ ವಕೀಲ ಚಂದ್ರಮೌಳಿ ಮಾತನಾಡಿ, ಆಧ್ಯಾತ್ಮಿಕತೆಯ ಜತೆಗೆ ಜೀವನದಲ್ಲಿ ಮುನ್ನಡೆದಾಗ ಪ್ರಜ್ಞಾವಂತ ಸಮಾಜ ನಿರ್ಮಾಣ ಆಗಲು ಸಾಧ್ಯ. ಧರ್ಮ ಮರೆತ ರಾಷ್ಟ್ರಕ್ಕೆ ಅಥವಾ ವ್ಯಕ್ತಿಗೆ ಸುಖ ಇರುವುದಿಲ್ಲ ಧರ್ಮದ ಜತೆಗೆ ದೈನಂದಿನ ಚಟುವಟಿಕೆಗಳು ನಡೆಸಬೇಕು ಆಗ ಸ್ವಾರ್ಥ ರಹಿತ ಸಮಾಜ ಕಾರ್ಯ ನಡೆಸಲು ಸಾಧ್ಯ. ಮಠಗಳ ಸ್ವಾಮೀಜಿಗಳಿಂದಲೂ ನ್ಯಾಯ ದೊರಕಿಸಿಕೊಡುವ ಕಾರ್ಯ ಸಾಕಷ್ಟು ಪ್ರಕರರಣಗಳು ನಡೆದಿವೆ. ಸ್ವಾಮೀಜಿಗಳು ಕೂಡ ಕಕ್ಷೀದಾರರಾಗಿರುವ ಘಟನೆಗಳು ನಡೆದಿವೆ ಎಂದರು.
ಬೆಂಗಳೂರಿನ ನ್ಯಾಯಾಧೀಶರಾದ ಜಯಶ್ರ್ರೀ ಮಾತನಾಡಿ, ಬೆಳ್ಳಿ, ಬಂಗಾರ, ಹಣ, ಆಸ್ತಿ ಇದಾವುದೂ ನಿಜವಾದ ಸಂಪತ್ತಲ್ಲ. ನಮಗೆ ಎಲ್ಲವನ್ನೂ ದಯಪಾಲಿಸಿರುವ ಭಗವಂತನ ಸ್ಮರಣೆಯೇ ನಿಜವಾದ ಸಂಪತ್ತು. ಭಗವಂತನ ಸ್ಮರಣೆಯಿಂದ ಯಾವಾಗ ವಿಮುಖರಾಗುತ್ತೇವೆಯೋ ಅಂದೇ ಆಪತ್ತು ಎಂದರು.
ಈ ಸಂದರ್ಬದಲ್ಲಿ 2024ನೇ ವರ್ಷ ದ ಕ್ಯಾಲೆಂಡರ್ ಬಿಡುಗಡೆಯನ್ನು ಶಾಸಕರು ಬಿಡುಗಡೆ ಮಾಡಿದರು.
ಶ್ರೀ ಕ್ಷೇತ್ರಕ್ಕೆ ಸಹಕಾರ ನೀಡಿದ ಗಣ್ಯರಿಗೆ ಸನ್ಮಾನ ನಡೆಯಿತು.
ಕಾರ್ಯಕ್ರಮದಲ್ಲಿ ಮನೆಹಳ್ಳಿ ಮಠಾಧ್ಯಕ್ಷ ಶ್ರೀ ಮಹಾಂತಶಿವಲಿಂಗ ಸ್ವಾಮೀಜಿ, ಕಲ್ಲಹಳ್ಳಿ ಮಠಾಧ್ಯಕ್ಷ ಶ್ರೀ ರುದ್ರಮುನಿ ಮಹಾಸ್ವಾಮೀಜಿ, ಕೆಸತೂರು ಮಠಾಧ್ಯಕ್ಷ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ವೀರಶೈವ ಮಹಾಸಭಾಧ್ಯ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ, ದೊಡ್ಡ ಬಳ್ಳಾಪುರ ಮಠಾಧ್ಯಕ್ಷ ಶ್ರೀ ನಿಶ್ಚಲ ದೇಶೀಕೇಂದ್ರ ಸ್ವಾಮೀಜಿ, ದೃಷ್ಟಿ ಡೆವಲಪರ್ ಸಂಸ್ಥೆಯ ಮಾಲೀಕ ರವಿಶಂಕರ್, ಗುಂಡ್ಲುಪೇಟೆ ಕ್ರಷರ್ ಮಾಲೀಕ ಮಲ್ಲಿಕಾರ್ಜುನ್ ಇದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕ ಜಯಕುಮಾರ್ ವಹಿಸಿದ್ದರು.
ಶ್ರೀ ಗುರುಸಿದ್ಧವೀರೇಶ್ವರ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಕ್ಷೇತ್ರನಾಥ ಶ್ರೀ ವೀರಭದ್ರೇಶ್ವರ, ಶ್ರೀ ಗುರುಸಿದ್ಧವೀರೇಶ್ವರ, ಶ್ರೀ ತಪೋವನೇಶ್ವರಿ, ಚಲುವರಾಯಸ್ವಾಮಿ ಉತ್ಸವ ಮೂರ್ತಿಗಳೊಂದಿಗೆ ಯಶಳೂರಿನ ನಂದಿದ್ವಜ, ವೀರಗಾಸೆ, ದುಗ್ಗಳ ಹೊತ್ತ ಮಹಿಳೆಯರು ಉತ್ಸವಕ್ಕೆ ಮೆರುಗು ತಂದರು.
25 ಸಾವಿರ ಎಣ್ಣೆ ದೀಪಗಳನ್ನು ಹಾಗೂ 21 ವಿವಿಧ ಮಾದರಿಯಿಂದ ಸ್ಥಳದಲ್ಲೇ ಕೊಬ್ಬರಿ, ತರಕಾರಿ, ಎಳನೀರು, ಧಾನ್ಯಗಳನ್ನು ಬಳಸಿ ತಯಾರಿಸಿದ ದೀಪಗಳನ್ನು ಉರಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಆಕಾಶದಲ್ಲಿ ವರ್ಣರಂಜಿತ ಪಟಾಕಿಗಳನ್ನು ಸಿಡಿಸಿ ಸಾವಿರಾರು ಭಕ್ತರ ಮೆಚ್ಚುಗೆಗಳಿಸಿದ್ದು ವಿಶೇಷವಾಗಿತ್ತು, ಉತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ವರದಿ :  ಎನ್.ಎ‌. ಅಶ್ವಥ್ ಕುಮಾರ್ (ನೀರಗುಂದ)  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಎಚ್1-ಎನ್1 : ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚನೆ*

ಆಗಷ್ಟ್ 29, 2026

*ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*

ಆಗಷ್ಟ್ 29, 2026

*ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*

ಆಗಷ್ಟ್ 29, 2026

*ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*

ಆಗಷ್ಟ್ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಆ.29 NEWS DESK : ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟನ್ನು ಹಾಕಿಕೊಟ್ಟು, ವ್ಯಾಕರಣದ ಶಿಸ್ತನ್ನು ರೂಢಿಸಿದವರು ಭಾಷಾ ವಿಜ್ಞಾನಿ ಡಾ.…

*ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*

ಆಗಷ್ಟ್ 29, 2026

ಕೊಡಗಿನಲ್ಲಿ ಕರವೇ ಸ್ವಾಭಿಮಾನಿ ಸೇನೆಗೆ ನೂತನ ಸದಸ್ಯರ ಸೇರ್ಪಡೆ

ಆಗಷ್ಟ್ 29, 2026

*ತೀವ್ರಗೊಳಿಸಿದ ಐಇಸಿ ಅಭಿಯಾನ : ಮ್ಯಾರಥಾನ್ ಮೂಲಕ ಎಚ್‌ಐವಿ/ಏಡ್ಸ್ ಜಾಗೃತಿ*

ಆಗಷ್ಟ್ 29, 2026

*ಮಡಿಕೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ : ಸ್ವಾವಲಂಬಿ ಮಹಿಳಾ ಫಲಾನುಭವಿಗಳ ಗುರುತಿಸಿ ಸನ್ಮಾನಕ್ಕೆ ಕ್ರಮ*

ಆಗಷ್ಟ್ 29, 2026

*ಶಿಸ್ತುಬದ್ಧ ಶಿಕ್ಷಣದಿಂದಲೇ ಸಮಾಜದ ಯಶಸ್ಸು, ದೇಶದ ಪ್ರಗತಿ : ಶಾಸಕ ಎ.ಎಸ್.ಪೊನ್ನಣ್ಣ*

ಆಗಷ್ಟ್ 29, 2026

*ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಶಿಸ್ತುಬದ್ಧ ಜೀವನವೇ ಸಾಧನೆಯ ದಾರಿದೀಪ: ಕರ್ನಲ್ ಸಂಜೀವ್ ಕುಮಾರ್*

ಆಗಷ್ಟ್ 29, 2026

*ಕೊಡಗು ವಿದ್ಯಾಲಯದಲ್ಲಿ ಬ್ರಹ್ಮಗಿರಿ ಸಹೋದಯ ಸಿಬಿಎಸ್ಇ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ*

ಆಗಷ್ಟ್ 29, 2026

*ಮಡಿಕೇರಿ ನಗರಸಭೆ : ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನಕ್ಕೆ ಒತ್ತು : ಶಾಸಕ ಮಂತರ್ ಗೌಡ*

ಆಗಷ್ಟ್ 29, 2026

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ : ಪರಿಶಿಷ್ಟರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಆದ್ಯ ಕೆಲಸವಾಗಿದೆ : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ*

ಆಗಷ್ಟ್ 29, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.