ಮಡಿಕೇರಿ ಜ.9 : ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಮಂಡ್ಯದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕೆದಮುಳ್ಳೂರು ಗ್ರಾಮದ ಕೌಶಿ ಕಾವೇರಮ್ಮ ಚಿನ್ನದ ಪದಕ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವಿದುಷಿ ಹೇಮಾವತಿ ಕಾಂತರಾಜ್ ಹಾಗೂ ಕಾವ್ಯಶ್ರೀ ಅವರ ಬಳಿ ತರಬೇತಿ ಪಡೆಯುತ್ತಿರುವ ಕೌಶಿ ಕಾವೇರಮ್ಮ , ಕೆದಮುಳ್ಳೂರು ಗ್ರಾಮದ ವಿ.ಡಿ.ಡಾಲಿ ಮತ್ತು ವಿ.ಡಿ.ಸೀಮ ದಂಪತಿಯ ಪುತ್ರಿ.







