ವಿರಾಜಪೇಟೆ ಜ.10 : “ಪರ್ಸೆಪ್ಸನ್ ಅಯಿನ್ಡ್ ಚಾಲೆಂಜ್ ಸ್ ಅಫ್ ಗ್ರೀನ್ ಬ್ಯಾಂಕಿಂಗ್, ಎ ಸ್ಪೆಷಲ್ ರೆಫರೆನ್ಸ್ ಟು ಕೊಡಗು ಡಿಸ್ಟ್ರಿಕ್ ಓಫ್ ಕರ್ನಾಟಕ ಸ್ಟೇಟ್ “ಎಂಬ ವಿಷಯದ ಬಗ್ಗೆ ಡಾ. ಕುಸುಮಾಕರ ಹೆಬ್ಬಾರ ಅವರ ಮಾರ್ಗದರ್ಶನದಲ್ಲಿ ಸಾದರ ಪಡಿಸಿದ ಮಹಾ ಪ್ರಭಂದಕ್ಕೆ ಮಂಗಳೂರು ವಿಶ್ವವಿದ್ಯಾಲಯವು ರುದ್ರಕುಮಾರ್ ಅವರಿಗೆ ಪಿ.ಎಚ್. ಡಿ. ಪದವಿಯನ್ನು ನೀಡಿದೆ.
ರುದ್ರಕುಮಾರ್ ರವರು ಪ್ರಸ್ತುತ ಸುಳ್ಯದ ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಇವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಿಟಿಸಿಜಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಸಂತ ಜೋಸೆಫರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಮತ್ತು ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. ಮಾತ್ರವಲ್ಲದೆ ತಮ್ಮ ಸೇವಾ ದಕ್ಷತೆ, ಪ್ರಾಮಾಣಿಕತೆ ಮತ್ತು ಸರಳ ವ್ಯಕ್ತಿತ್ವದಿಂದ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.