ಮಡಿಕೇರಿ ಫೆ.6 : ‘ಐ ಬಿಲಾಂಗ್ಸ್ ಟು ನೋ ಪಾರ್ಟಿ’ ಎನ್ನುತ್ತಲೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಆಕಾಂಕ್ಷಿಯೇ ಆಗಿದ್ದೇನೆ. ಆದರೆ, ಈ ಬಗ್ಗೆ ತಾನೇನು ಕಾಂಗ್ರೆಸ್ ಪಕ್ಷವನ್ನು ಕೇಳಿಲ್ಲವೆಂದು ಎಂಎಲ್ಸಿ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮೂಲ ಆಶಯ ಶ್ರೀಸಾಮಾನ್ಯರಿಗೆ ಒಳಿತನ್ನು ಮಾಡುವುದಷ್ಟೆ ಎಂದು ಸ್ಪಷ್ಟಪಡಿಸಿದರು.