ಚೆಯ್ಯಂಡಾಣೆ ಫೆ.7 NEWS DESK : ಕೇರಳದ ಪಯ್ಯವೂರ್ ಈಶ್ವರ ದೇವಾಲಯದ ವಾರ್ಷಿಕ ಹಬ್ಬವು ಫೆ.12 ರಿಂದ ಫೆ.23ರ ವರೆಗೆ ನಡೆಯಲಿದೆ.
ಈ ವಾರ್ಷಿಕ ಹಬ್ಬಕ್ಕೆ ತಕ್ಕ ಮುಖ್ಯಸ್ಥರಾದ ಬೋವ್ವೆರಿಯಂಡ ಮತ್ತು ಮುಂಡಿಯ್ಯೊಳಂಡ ಕುಟುಂಬಸ್ಥರು ಫೆ.10 ರಂದು ಬೆಳಿಗ್ಗೆ ಚೇಲವಾರ, ಕಬ್ಬೆ ಬೆಟ್ಟದ ಮೂಲಕ ಕಾಲು ನಡಿಗೆಯಲ್ಲಿ ಕೇರಳದ ಪಯ್ಯವೂರ್ ಈಶ್ವರ ದೇವಸ್ಥಾನಕ್ಕೆ ಎತ್ತು ಪೋರಾಟ ಮೂಲಕ ಅಕ್ಕಿ ತಲುಪಿಸಲಿದ್ದು, ಸೋಮವಾರ ಬೆಳಿಗ್ಗೆ ಅಕ್ಕಿಯನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ.
ಫೆ.21 ರಂದು ನಾಡಿನ ಭಕ್ತರು ಎತ್ತು ಪೋರಾಟದ ಮೂಲಕ ದೇವರ ಸನ್ನಿಧಾನದಲ್ಲಿ ಅಕ್ಕಿಯನ್ನು ಸಮರ್ಪಣೆ ಮಾಡಲಿದ್ದು, ಅಂದಿನಿಂದ ಎಂಟು, ಒಂಬತ್ತು ಮತ್ತು ಹತ್ತನೇ ಉತ್ಸವವೂ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ತಕ್ಕ ಮುಖ್ಯಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ : ಅಶ್ರಫ್