ವಿರಾಜಪೇಟೆ ಫೆ.7 NEWS DESK: ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ವಿದ್ಯಾರ್ಥಿನಿ ಭರತನಾಟ್ಯ ನೃತ್ಯ ಕಲಾವಿದೆ ಬಿ.ಎನ್.ಲಾವಣ್ಯ ಗೆ ಸುವರ್ಣ ಶ್ರೀ ಕನ್ನಡ ಪ್ರಶಸ್ತಿ ಲಭಿಸಿದೆ.
ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನೃತ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರು ಬಿ.ಎನ್.ಲಾವಣ್ಯ ಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಲಾವಣ್ಯ ವಿರಾಜಪೇಟೆಯ ಪ್ರೇಮಾಂಜಲಿ ಆಚಾರ್ಯರ ಶಿಷ್ಯೆ ಹಾಗೂ ಬೇಟೋಳಿ ರಾಮನಗರದ ಬಿ.ಜಿ.ನಟರಾಜ್ ಹಾಗೂ ಸುನಂದ ದಂಪತಿಗಳ ಪುತ್ರಿಯಾಗಿದ್ದು, ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ದ್ವಿತೀಯ ಬಿಬಿಎ ವ್ಯಾಸಂಗ ಮಾಡುತ್ತಿದ್ದಾಳೆ.