ವಿರಾಜಪೇಟೆ ಫೆ.14 NEWS DESK : ವಿರಾಜಪೇಟೆಯ ಸರ್ಕಾರಿ ಬಿ.ಸಿ ಪ್ರೌಢಶಾಲೆ ದೇವಣಗೆರೆಯಲ್ಲಿ ಜಸ್ಟ್ ರೊಬೋಟಿಕ್ಸ್ ಹಾಗೂ ಓಜಸ್ವಿ ಫೌಂಡೇಶನ್ ಸಹಭಾಗಿತ್ವದಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ 8ನೇ ತರಗತಿಯ ರೋಬೋಟಿಕ್ ಸೈನ್ಸ್ ತರಬೇತಿ ಪಡೆದ ವಿದ್ಯಾರ್ಥಿಗಳ ವತಿಯಿಂದ “ಓಜಸ್ವಿ ಚೈತನ್ಯ” ಎಂಬ ಕಾರ್ಯಕ್ರಮ ನಡೆಯಿತು.
ಬಿ.ಸಿ ಪ್ರೌಢಶಾಲೆ ದೇವಣಗೆರೆಯ ಮುಖ್ಯ ಶಿಕ್ಷಕ ಲೋಕೇಶ್ ಮಾತನಾಡಿ, ಮಕ್ಕಳಿಗೆ ಉತ್ತೇಜನ ನೀಡಿದರು.
ಓಜಸ್ವಿ ಟ್ರಸ್ಟಿ ಕವಿತಾ ಹಾಗೂ ಜಸ್ಟ್ ರೋಬೋಟಿಕ್ಸ್ ಸಿ.ಇ.ಒ ಬ್ರಿಜೇಶ್ ಹೊಸ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳ ಊಹೆಗೂ ಮೀರಿದ ಕುತೂಹಲಕಾರಿಯಾದ ವಿಷಯಗಳನ್ನು ಪ್ರಸ್ತಾಪಿಸಿದರು.
ನಂತರ ಕಾವೇರಿಶಾಲೆಯ ವಿದ್ಯಾರ್ಥಿಗಳು ತಾವು ಕಲಿತು ಕೊಂಡ ಮೋಟಾರ್ ಕಾರ್ ತಯಾರಿಸುವ ಹಾಗೂ ಚಲಾಯಿಸುವ ವಿಧಾನವನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾಗಿ ಕಲಿಸಿ, ಆ ವಿಧ್ಯಾರ್ಥಿಗಳು ಪ್ರಾಯೋಗಿಕವಾಗಿ
ಮಾಡಿ ತೋರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಕಾರ್ಯಕ್ರಮದಲ್ಲಿ ಸರಕಾರಿ ಬಿ.ಸಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸರಸ್ವತಿ, ಕಾವೇರಿ ಶಾಲೆಯ ಅಧ್ಯಕ್ಷ ಸುದೇಶ್ ಪಿ. ಎಸ್,ಕಾರ್ಯದರ್ಶಿ ಪಿ.ವಿನೋದ್, ಎನ್,ಜೆ.ಸಿ ಪ್ರೌಢಶಾಲೆಯ ಸಹಶಿಕ್ಷಕರು, ಕಾವೇರಿ ಶಾಲೆಯ ದೈಹಿಕ ಶಿಕ್ಷಕಿ ಮೋನಿಕಾ, ಸಹ ಶಿಕ್ಷಕಿ ತುಳಸಿ ಹಾಜರಿದ್ದರು.
ಕಾವೇರಿ ಶಾಲೆಯ ಅಧ್ಯಕ್ಷ ಬಿ.ಎಸ್.ಸುದೇಶ್ ನೆರೆದಿದ್ದವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು.




































