ಮಡಿಕೇರಿ ಫೆ.17 NEWS DESK : ಬಹಳ ವಷ೯ಗಳಿಂದ ದುರಸ್ತಿಗೊಳಗಾಗಿದ್ದ ಅಪ್ಪಂಗಳ – ಜ್ಯೋತಿ ಕಾಲೋನಿ – ಅರವತ್ತೋಕ್ಲು ರಸ್ತೆ ದುರಸ್ಥಿಗೆ ಸಂಬಂಧಿಸಿದಂತೆ ಗ್ರಾಮಸ್ಥರ ಮನವಿಗೆ ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖಗೆ೯ ಸ್ಪಂದಿಸಿದ್ದಾರೆ.
ಅಪ್ಪಂಗಳದ ಸಾಂಬಾರ ಮಂಡಳಿ ಕಚೇರಿಯಿಂದ ಜ್ಯೋತಿಕಾಲೋನಿಗಾಗಿ ಅರವತ್ತೋಕ್ಲು ಗ್ರಾಮಕ್ಕೆ ತೆರಳುವ 1.50 ಕಿ.ಮೀ. ಅಂತರದ ರಸ್ತೆ 25 ವಷ೯ಗಳಿಂದ ಹಾಳಾಗಿದೆ. ಇದರಿಂದಾಗಿ ಈ ವ್ಯಾಪ್ತಿಯ ಗ್ರಾಮಸ್ಥರು, ವಿದ್ಯಾಥಿ೯ಗಳು, ವಯೋವೃದ್ಧರು, ರೋಗಿಗಳಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜ್ಯೋತಿ ಕಾಲೋನಿಗಾಗಿ ಸಾಗುವ ರಸ್ತೆ ಹಾಳಾಗಿ ನೂರಾರು ಮಂದಿಗೆ ಸಮಸ್ಯೆಯಾಗಿತ್ತು. ಈ ನಿಟ್ಟಿನಲ್ಲಿ ಗ್ರಾಮಸ್ಥರಾದ ನಿವೖತ್ತ ವಾಯುಪಡೆಯ ನಿವೃತ್ತ ಅಧಿಕಾರಿ ಮುಂಜಾಂದೀರ ಅಪ್ಪಯ್ಯ ರಾಜಾ ಅವರು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ ಖಗೆ೯ ಅವರನ್ನು ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ ಸಹಕಾರದಲ್ಲಿ ಭೇಟಿಯಾಗಿ ರಸ್ತೆ ದುರಸ್ಥಿಗೆ ಮನವಿ ಸಲ್ಲಿಸಿದರು.
ಕಾಂಕ್ರೀಟ್ ರಸ್ತೆಯನ್ನು ನಿಮಿ೯ಸುವ ಮೂಲಕ ಸವ೯ಋತು ರಸ್ತೆಯನ್ನು ನೀಡುವಂತೆ ಕೋರಿದರು. ಈ ಸಂದಭ೯ ಗ್ರಾಮೀಣ ಭಾಗದ ಈ ರಸ್ತೆಯನ್ನು ತಕ್ಷಣವೇ ದುರಸ್ಥಿಪಡಿಸಲು ಕ್ರಮಕೈಗೊಳ್ಳುವುದಾಗಿ ಸಚಿವ ಪ್ರಿಯಾಂಕಖಗೆ೯ ಭರವಸೆ ನೀಡಿದರು ಎಂದು ಅಪ್ಪಯ್ಯ ರಾಜಾ ಮಾಹಿತಿ ನೀಡಿದ್ದಾರೆ. ಬಿದ್ದಾಟಂಡ ಕಾವೇರಪ್ಪ ಹಾಜರಿದ್ದರು.