ಮಡಿಕೇರಿ ಫೆ.18 NEWS DESK : ಇತ್ತೀಚೆಗೆ ಕುಶಾಲನಗರದ ಶೋರೂಮ್ ಒಂದರಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟ ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ಶದೀದ್ ಅವರ ಮನೆಗೆ ಶಾಸಕ ಡಾ.ಮಂತರ್ ಗೌಡ ಅವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಮಡಿಕೇರಿ ಮುಸ್ಲಿಂ ಜಮಾಅತ್ ಗಳ ಒಕ್ಕೂಟದ ಪದಾಧಿಕಾರಿಗಳು ಶಾಸಕರಿಗೆ ಮನವಿ ಸಲ್ಲಿಸಿ ರೂ.10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಸರ್ಕಾರಿ ನಿವೇಶನ ಮಂಜೂರು ಮಾಡಬೇಕು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶದೀದ್ ಗೆ ಪ್ರಾಥಮಿಕ ಚಿಕಿತ್ಸೆ ನೀಡದೆ ನಿರ್ಲಕ್ಷö್ಯ ವಹಿಸಿದ ಆರೋಪ ಎದುರಿಸುತ್ತಿರುವ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆಗಳ ಮನವಿ ಪತ್ರವನ್ನು ಶಾಸಕರಿಗೆ ಸಲ್ಲಿಸಿದರು.
ಮುಸ್ಲಿಂ ಜಮಾಅತ್ ಗಳ ಒಕ್ಕೂಟದ ಅಧ್ಯಕ್ಷ ನಜೀರ್, ಉಪಾಧ್ಯಕ್ಷ ಫಯಾಜ್, ಪ್ರಧಾನ ಕಾರ್ಯದರ್ಶಿ ಅಮೀನ್ ಮೊಹಿಸಿನ್, ಖಜಾಂಚಿ ಇಸ್ಮಾಯಿಲ್, ಸದಸ್ಯ ಮೊಹಮ್ಮದ್ ಆಲಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.










