ಮಡಿಕೇರಿ ಫೆ.18 NEWS DESK : ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮೋಕ್ಷಿತ್ ರಾಜ್ ಹೊನ್ನುಗುಡಿ ಹಾಗೂ ದರ್ಶನ್ ಜೋಯಪ್ಪ ಅವರುಗಳನ್ನು ನೇಮಕ ಮಾಡಿರುವುದಾಗಿ ಮಂಡಲದ ಅಧ್ಯಕ್ಷ ಗೌತಮ್ ಗೌಡ ತಿಳಿಸಿದ್ದಾರೆ.
ವಕ್ತಾರರಾಗಿ ಕಂಠಿ ಕಾರ್ಯಪ್ಪ, ಕೋಶಾಧ್ಯಕ್ಷರಾಗಿ ಉಮಾಶಂಕರ್, ಉಪಾಧ್ಯಕ್ಷರುಗಳಾಗಿ ಎಂ.ಡಿ.ಕೃಷ್ಣಪ್ಪ, ಎನ್.ಆರ್.ಅಜೀಶ್ ಕುಮಾರ್, ಭುವನೇಂದ್ರ ಜಿ.ಆರ್, ಅರುಣ ಕುಮಾರಿ ಎಚ್.ಪಿ, ಯೋಗೇಶ್ ಎಂ.ಎಸ್, ಪದ್ಮಾವತಿ ಹೆಚ್.ಜಿ, ಕಾರ್ಯದರ್ಶಿಗಳಾಗಿ ಲಿಖಿತ್ ಎಂ.ಡಿ, ಇಂದಿರಾ ಮೊಣ್ಣಪ್ಪ, ನಿತ್ಯಾನಂದ, ಸಂಜು ಹರಗ, ವೇದಾವತಿ, ಸುಜಾತ ಬಿ.ಜೆ ಹಾಗೂ ಕಾರ್ಯಾಲಯ ಕಾರ್ಯದರ್ಶಿಯಾಗಿ ಪ್ರಜಾ ಪೂಣಚ್ಚ ಆಯ್ಕೆಯಾಗಿದ್ದಾರೆ.
ಜಿಲ್ಲಾಧ್ಯಕ್ಷರ ಅನುಮೋದನೆ ಮೇರೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸೋಮವಾರಪೇಟೆ ಮಂಡಲದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು ಎಂದು ಗೌತಮ್ ಗೌಡ ತಿಳಿಸಿದ್ದಾರೆ.










